ಭೋಜಪುರಿ ನಟಿ ಆಕಾಂಕ್ಷಾ ಆತ್ಮಹತ್ಯೆ ಪ್ರಕರಣ: ಇದು ಕೊಲೆ ಎಂದು ತಾಯಿ ಆರೋಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಣಾಸಿ (Varanasi) ಹೋಟೆಲ್‌ವೊಂದರಲ್ಲಿ ನಿನ್ನೆಯಷ್ಟೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಭೋಜಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ವ್ಯವಸ್ಥಿತಿ ಕೊಲೆ ಎಂದು ನಟಿಯ ತಾಯಿ ಆರೋಪ ಮಾಡಿದ್ದಾರೆ.

ಗಾಯಕ ಸಮರ್ ಸಿಂಗ್ (Samar Singh) ಹಾಗೂ ಸಂಜಯ್ ಸಿಂಗ್ (Sanjay Singh)ಅವರೇ ತಮ್ಮ ಮಗಳನ್ನು ಕೊಂದಿರುವುದಾಗಿ (Murder) ಗಂಭೀರ ಆರೋಪ ಮಾಡಿದ್ದಾರೆ. ನಿರಂತರವಾಗಿ ಇಬ್ಬರೂ ತಮ್ಮ ಮಗಳಿಗೆ ಬೆದರಿಕೆ ಹಾಕುತ್ತಿದ್ದರು ಆರೋಪ ಹೊರಿಸಿದ್ದಾರೆ.

ಭೋಜಪುರಿ ನಟಿ (Bhojapuri Actress) ಆಕಾಂಕ್ಷಾ ದುಬೆ (Akanksha Dubey) ಅವರು ಭಾನುವಾರದಂದು (ಮಾ.26) ವಾರಣಾಸಿ (Varanasi) ಹೋಟೆಲ್‌ವೊಂದರಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ನಟಿ ಶವ ಪತ್ತೆಯಾಗಿತ್ತು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಕಾಂಕ್ಷಾ ಸಿನಿಮಾ ಶೂಟಿಂಗ್‌ಗಾಗಿ ವಾರಣಾಸಿಗೆ ಬಂದಿದ್ದರು ಎನ್ನಲಾಗಿದೆ. ಒಂದು ದಿನದ ಹಿಂದೆ, ಶನಿವಾರ ರಾತ್ರಿ, ಆಕಾಂಕ್ಷಾ ತನ್ನ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ, ಪ್ರೇಮಿಗಳ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ತನ್ನ ರಿಲೇಷನ್‌ಶಿಪ್ ಅಧಿಕೃತಗೊಳಿಸಿ ಸುದ್ದಿ ಮಾಡಿದರು. ಇದೀಗ ನಟಿಯ ಸಾವು ನಿಜಕ್ಕೂ ಕೊಲೆಯೋ ಅಥವಾ ಆತ್ಮಹತ್ಮೆನ ಎಂಬ ಅನುಮಾನ ಉಂಟಾಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!