ಅಮೃತಯಾತ್ರೆ: ವಿಶ್ವದ ಸೌಂದರ್ಯಕ್ಕೆ ಭಾರತದ ಆಭರಣ ಕಿರೀಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸೋನೇ ಕಿ ಚಿಡಿಯಾ ಎಂದು ಒಂದು ಕಾಲದಲ್ಲಿ ಕರೆಸಿಕೊಂಡಿದ್ದು ಭಾರತ. ಇಲ್ಲಿನ ಸಂಪತ್ತು ಜಗತ್ತಿನ ಕಣ್ಣು ಕೋರೈಸುವಂತೆ ಮಾಡಿತ್ತು. ಸಂಪತ್ತು ದೋಚಲೆಂದೇ ಒಂದೆರಡಲ್ಲ 17 ಬಾರಿ ದಂಡೆತ್ತಿ ಬಂದಿದ್ದ ದಾಳಿಕೋರ ಮೊಹಮದ್‌ ಘಜ್ನಿ. ಅದು ಬಿಡಿ ವಿಜಯನಗರ ಅರಸರ ಕಾಲದಲ್ಲಿ ಮುತ್ತು ರತ್ನಗಳನ್ನು ರಸ್ತೆಯಂಚಿನಲ್ಲಿ ತರಕಾರಿ ಮಾರಿದಂತೆ ಮಾರಾಟ ಮಾಡಲಾಗುತ್ತಿತ್ತು ಅಂತ ವೀದೇಶಿ ಪ್ರವಾಸಿಗರೇ ಉಲ್ಲೇಖಿಸಿದ್ದಾರೆ. ಹೀಗಿದ್ದ ದೇಶ ಕೊನೆಗೆ ಬ್ರೀಟೀಶರ ಆಳ್ವಿಕೆಗೆ ಸಿಕ್ಕು ಬರಡಾಗಿ ಹೋಯಿತು. ಅಂತೂ ಇನ್ನೂರು ವರ್ಷಗಳಿಗೂ ಅಧಿಕಕಾಲದ ಆಳ್ವಿಕೆಯ ನಂತರ ಸ್ವತಂತ್ರಗೊಂಡ ದೇಶ ಇಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನಾಚರಿಸಿಕೊಳ್ಳುತ್ತಿದೆ. ಇಂದಿಗೂ ಕೂಡ ಜಗತ್ತಿಗೆ ಭಾರತವು ತನ್ನ ಶ್ರೀಮಂತ ಅಕ್ಕಸಾಲಿಗತನವನ್ನು ಕೊಡುಗೆಯಾಗಿ ನೀಡುತ್ತಿದೆ. ತನ್ನ ಉನ್ನತ ಕಲಾತ್ಮಕತೆಯ ಮೂಲಕ ಜಗತ್ತಿಗೇ ಸುಂದರ ಆಭರಣಗಳನ್ನು ತಯಾರಿಸಿಕಳಿಸುತ್ತಿದೆ.

ಬೆಳ್ಳಿ ಮತ್ತು ವಜ್ರಾಭರಣಗಳ ರಫ್ತಿನಲ್ಲಿ ಭಾರತ ಇಂದು ಜಗತ್ತಿನಲ್ಲಿಯೇ ನಂಬರ್ 1.‌ ಸ್ಥಾನದಲ್ಲಿದೆ. ಜಗತ್ತಿಗೆ ರಫ್ತಾಗುವ 80ಶೇಕಡಾದಷ್ಟು ವಜ್ರಗಳು ಭಾರತದಲ್ಲಿಯೇ ಹೊಳಪು ಪಡೆದಿರುತ್ತವೆ. ಚಿನ್ನ ಮತ್ತು ವಜ್ರದ ವ್ಯಾಪಾರವು GDP ಗೆ ಸುಮಾರು 7 ಶೇ. ಕೊಡುಗೆ ನೀಡುತ್ತದೆ ಮತ್ತು50 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ವರ್ಷದಿಂದ ವರ್ಷಕ್ಕೆ ಭಾರತದ ಆಭರಣ ರಫ್ತು ಹೆಚ್ಚಾಗುತ್ತಲೇ ಇದ್ದು ಕಳೆದ ಎರಡು ದಶಕಗಳಲ್ಲಿ 9 ಪಟ್ಟು ಆಭರಣ ರಫ್ತು ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!