ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮಕರ ಸಂಕ್ರಾಂತಿಯಂದು ಮಹಾ ಕುಂಭ 2025 ರ ಮೊದಲ ‘ಅಮೃತ ಸ್ನಾನ’ ನಡೆಸಲಾಗುತ್ತಿದ್ದು, ಪವಿತ್ರ ಸ್ನಾನ ಮಾಡಲು ಹಲವಾರು ಭಕ್ತರು ಸಂಗಮವನ್ನು ತಲುಪಿರುವುದರಿಂದ, ಉತ್ತರ ಪ್ರದೇಶದ ಡಿಜಿಪಿ ಪ್ರಶಾಂತ್ ಕುಮಾರ್ ಸಂಗಮದಲ್ಲಿ ಸ್ನಾನ ಮಾಡಿದ ಒಟ್ಟು ಸಂಖ್ಯೆಯ ಭಕ್ತರ ಮಾಹಿತಿ ನೀಡಿದ್ದಾರೆ. ಸಂಗಮದಲ್ಲಿ ಮೊದಲ ಅಮೃತ ಸ್ನಾನ ಮಾಡಿರುವ ಭಕ್ತರ ಸಂಖ್ಯೆ 1 ಕೋಟಿ ತಲುಪಿದೆ ಎಂದು ತಿಳಿಸಿದ್ದಾರೆ.
ನಮ್ಮ ಎಲ್ಲಾ ಹಿರಿಯ ಅಧಿಕಾರಿಗಳು ಡಿಜಿಪಿ, ಮುಖ್ಯ ಕಾರ್ಯದರ್ಶಿ ಮತ್ತು ಸಿಎಂ ಕಂಟ್ರೋಲ್ ರೂಂ ಸೇರಿದಂತೆ ವಿವಿಧ ನಿಯಂತ್ರಣ ಕೊಠಡಿಗಳ ಮೂಲಕ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೆ ಮಕರ ಸಂಕ್ರಾಂತಿಯಂದು ರಾಜ್ಯದ ಪ್ರಮುಖ ನಗರಗಳಲ್ಲಿ ಜನರು ಸ್ನಾನ ಮಾಡುತ್ತಿದ್ದಾರೆ ಎಂದು ಡಿಜಿಪಿ ತಿಳಿಸಿದರು.
ವಾರಣಾಸಿ, ಗೋರಖ್‌ಪುರ ಮತ್ತು ಅಯೋಧ್ಯೆ ಸೇರಿದಂತೆ ವಿವಿಧ ನಗರಗಳಲ್ಲಿ ಮಕರ ಸಂಕ್ರಾಂತಿಯಂದು ವಿವಿಧ ನದಿಗಳ ದಡದಲ್ಲಿ ಎಂದಿನಂತೆ ಸಾಮಾನ್ಯ ರೀತಿಯಲ್ಲಿ ಸಾಗುತ್ತಿದೆ ಎಂದರು.