ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಂಗಳೂರಿನಲ್ಲಿರುವ ಐತಿಹಾಸಿಕ ಗವಿಗಂಗಾಧರೇಶ್ವರನ ಸನ್ನಿಧಿಯು ಉತ್ತರಾಯಣ ಪುಣ್ಯ ಮಕರ ಸಂಕ್ರಾಂತಿ ಋತುವಿನ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಗಂಗಾಧರನಿಗೆ ಭಾಸ್ಕರ ನಮಿಸುವ ಸೂರ್ಯರಶ್ಮಿಯ ವಿಸ್ಮಯದ ಕ್ಷಣ ಇಂದು ನಡೆಯಲಿದೆ
ಇಂದು ಮಕರ ಸಂಕ್ರಾಂತಿ. ವರ್ಷಕ್ಕೊಮ್ಮೆ, ಗವಿಗಂಗಾಧರ ದೇವಸ್ಥಾನದಲ್ಲಿ ಅದ್ಭುತವಾದ ವಿಸ್ಮಯ ನಡೆಯಲಿದೆ. ಪಥ ಬದಲಿಸಿದ ಸೂರ್ಯ ಇಂದು ಪರಮೇಶ್ವರನ ದರ್ಶನ ಪಡೆದು ಉತ್ತರಾಯಣ ಪ್ರವೇಶ ಮಾಡುತ್ತಾನೆ.
ಈ ವೇಳೆ ಸಂಜೆ ದೇಗುಲದ ಬಲಭಾಗದಲ್ಲಿರುವ ಕಿಂಡಿಯ ಮೂಲಕ ಪ್ರವೇಶಿಸುವ ಸೂರ್ಯ ರಶ್ಮಿ ಬಳಿಕ ನಂದಿಯ ಕೊಂಬುಗಳ ಮೂಲಕ ಹಾದು ಗವಿಯೊಳಗಿರುವ ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಭಾಸ್ಕರ ವಿಸ್ಮಯ ಇಂದು ನಡೆಯಲಿದೆ.