ಕಿತ್ತೂರಿನಲ್ಲಿ ಮೊಳಗಿದ ಅಮೃತ ಭಾರತಿಗೆ ಕನ್ನಡದಾರತಿ

ಹೊಸದಿಗಂತ ವರದಿ ಬೆಳಗಾವಿ :
“ಆಝಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮ ಜಿಲ್ಲೆಯ ಐತಿಹಾಸಿಕ ಕಿತ್ತೂರು ಚನ್ನಮ್ಮ ಪಟ್ಟಣದಲ್ಲಿ ಭಾನುವಾರ ಜರುಗಿತು.

ಕಾರ್ಯಕ್ರಮದ ಮೆರವಣಿಗೆ ಕಿತ್ತೂರು ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಚಾಲನೆ ನೀಡಲಾಯಿತು. ಕಿತ್ತೂರು ಚನ್ನಮ್ಮ ವೃತ್ತದಿಂದ ಕೋಟೆ ಆವರಣದವರೆಗೆ ಕುಂಭ ಕಳಶ ಮೆರವಣಿಗೆ, ಡೊಳ್ಳು ಕುಣಿತ, ಹಲಗೆ ಮೇಳ, ಬೊಂಬೆ ಕುಣಿತ ಪ್ರದರ್ಶನ, ವಿವಿಧ ಕಲಾ ತಂಡಗಳು, ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂಧರ್ಭದಲ್ಲಿ ಕಿತ್ತೂರು ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶೀಲ್ದಾರ ಸೋಮಪ್ಪ ಹಾಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!