ಭಾರತ ಸಂವಿಧಾನದ ಅಮೃತ ಮಹೋತ್ಸವ: ಪ್ಲಾಸ್ಟಿಕ್‌ನಲ್ಲಿ ಅರಳಿದ ‘ನಮ್ಮ ಸಂವಿಧಾನ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಸಂವಿಧಾನದ 75 ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥ ಅಭಿಯಾನ ನಡೆಯುತ್ತಿದೆ.

ತುಮಕೂರಿನಲ್ಲಿ ಜಾಗೃತಿ ಜಾಥಾಕ್ಕೆ ಇಡೀ ರಾಜ್ಯವೇ ಭೇಷ್ ಎಂದಿದೆ. ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ನಮ್ಮ ಸಂವಿಧಾನ ಎಂದು ಕನ್ನಡದಲ್ಲಿ ಬರೆಯಲಾಗಿದೆ.

ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಒಟ್ಟಾರೆ ಒಂದು ಲಕ್ಷದ 35 ಸಾವಿರ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ಅವುಗಳಿಂದ ಕನ್ನಡದಲ್ಲಿ ಜೋಡಿಸಲಾಗಿದ್ದು, ಡ್ರೋನ್ ಶಾಟ್‌ನಲ್ಲಿ ಅತ್ಯದ್ಭುತವಾಗಿ ಕಾಣಿಸುತ್ತಿದೆ.

ಇದು ಒಂದು ದಿನದ ಕೆಲಸವಲ್ಲ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಅದರ ಕವರ್‌ಗಳನ್ನು ತೆಗೆದು ಕ್ರಮಬದ್ಧವಾಗಿ ಜೋಡಿಸಲು 305 ವಿದ್ಯಾರ್ಥಿಗಳು ಕೆಲಸ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಕೂಡ ಕೈ ಜೋಡಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!