Monday, March 4, 2024

CINE | ಚಿರಂಜೀವಿ ನಟನೆಯ ‘ವಿಶ್ವಂಭರ’ ಟೀಮ್ ಸೇರಿಕೊಂಡ ನಟಿ ತ್ರಿಷಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿರಂಜೀವಿ ಚಿತ್ರಕ್ಕೆ ದಕ್ಷಿಣದ ಜನಪ್ರಿಯ ನಟಿ ತ್ರಿಷಾ ಮತ್ತೆ ಆಯ್ಕೆಯಾಗಿದ್ದಾರೆ. ಚಿತ್ರತಂಡ ಅಧಿಕೃತವಾಗಿ ನಾಯಕೀಯನ್ನು ಪರಿಚಯಿಸಿತು. ಮೊನ್ನೆಯಷ್ಟೇ ಸಂಕ್ರಾಂತಿ ಹಬ್ಬದ ದಿನ ಸುಗ್ಗಿ ಹಬ್ಬವನ್ನು ಮತ್ತಷ್ಟು ರೋಚಕವಾಗಿಸಲು ಚಿತ್ರತಂಡ ವಿಶ್ವಂಭರ ಚಿತ್ರದ ಟೀಸರ್ ಬಿಡುಗಡೆ ಮಾಡಿತ್ತು.

ಇದು ಚಿರು ಅವರ 156 ನೇ ಚಿತ್ರವಾಗಿದ್ದು, ಜಗದೇಕ ವೀರುಡು ಅತಿಲೋಕ ಸುಂದರಿ ಚಿತ್ರದ ನಂತರ ಚಿರಂಜೀವಿ ಮೊದಲ ಬಾರಿಗೆ ಫ್ಯಾಂಟಸಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೆಸರು “ವಿಶ್ವಂಭರ”. ಈ ಟೈಟಲ್ ಟೀಸರ್ ನಲ್ಲಿ ಗ್ರಾಫಿಕ್ ವರ್ಕ್ ಪರಿಣಾಮಕಾರಿಯಾಗಿದೆ. ಈ ಮಹಾಕಾವ್ಯ ಫ್ಯಾಂಟಸಿ ಸಾಹಸವನ್ನು ಬಿಂಬಿಸಾರ ಖ್ಯಾತಿಯ ಯುವಿ ಕ್ರಿಯೇಷನ್ಸ್ ಖ್ಯಾತಿಯ ವಸಿಷ್ಠ ನಿರ್ದೇಶಿಸಿದ್ದಾರೆ. ವಿಕ್ರಮ್, ವಂಶಿ ಮತ್ತು ಪ್ರಮೋದ್ ಹೂಡಿಕೆಯೊಂದಿಗೆ, ಚಿರಂಜೀವಿ ಸಿನಿಕರಿಯ್ ನಲ್ಲಿ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.

ವಿಶ್ವಂಭರ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ಮತ್ತು ಚೋಟಾ ಕೆ ನಾಯ್ಡು ಅವರ ಛಾಯಾಗ್ರಹಣವಿದೆ. ಎಎಸ್ ಪ್ರಕಾಶ್ ನಿರ್ಮಾಣ ವಿನ್ಯಾಸ, ಸುಶ್ಮಿತಾ ಕೊನಿಡೇಲ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!