ಅಮೃತ ಯಾತ್ರೆ: ಎಂಟೇ ವರ್ಷದಲ್ಲಿ 10 ಕೋಟಿ ಶೌಚಾಲಯ ಕಟ್ಟಿದ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
1981ರಲ್ಲಿ ಇಡೀ ಭಾರತದಲ್ಲಿ ಶೇ.1 ರಷ್ಟು ಮಾತ್ರ ಶೌಚಾಲಯಗಳಿದ್ದವು. ಆದರೆ 2019ರ ಹೊತ್ತಿಗೆ 100 ಶೇಕಡಾದಷ್ಟು ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ ಆ ಮೂಲಕ ಸ್ವಾತಂತ್ರ್ಯ ಬಂದು ಅಮೃತ ಯಾತ್ರೆಯನ್ನು ಆಚರಿಸುವ ಹೊತ್ತಿಗೆ ಗ್ರಾಮ ನೈಮರ್ಲ್ಯದ ಕನಸನ್ನು ನನಸು ಮಾಡಿದೆ ಭಾರತ.

ಇದರಲ್ಲಿ ಗಮನಿಸಬೇಕಾದ ಅಂಶವೇನೆಂದರೆ 1981 ರಿಂದ 2011 ವರೆಗಿನ ಅವಧಿಯಲ್ಲಿ ಕೇವಲ 31 ಶೇಕಡಾದಷ್ಟು ಶೌಚಾಲಯಗಳ ನಿರ್ಮಾಣವಾಗಿತ್ತು. ʼಬಯಲು ಶೌಚ ಮುಕ್ತʼ ಭಾರತವನ್ನು ಸೃಷ್ಟಿಸುವ ಗುರಿಯೊಂದಿಗೆ ಜಾರಿಯಾದ ‌ʼಸ್ವಚ್ಛಭಾರತ ಮಿಷನ್ʼ ಈ ನಿರ್ಮಾಣಕ್ಕೆ ವೇಗ ಒದಗಿಸಿತು.

ಈ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 10 ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣವಾಗಿದೆ. ಹೊತ್ತು ಮೂಡುವುದಕ್ಕಿಂತ ಮುಂಚೆ ಶೌಚಕಾರ್ಯ ತೀರಿಸಲು ತಾಯಂದಿರು ಕಷ್ಟಪಡಬೇಕಾದ ಪರಿಸ್ಥಿತಿ ದೂರವಾಗಿದೆ.

ದೇಶದಾದ್ಯಂತ 6 ಲಕ್ಷಕ್ಕೂ ಅಧಿಕ ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!