ನೀರಿನೊಳಗೆ ಕೇಕ್ ಕತ್ತರಿಸಿ ವಿರಾಟ್ ಕೊಹ್ಲಿಗೆ ಶುಭಾಶಯ ಕೋರಿದ ಸಬೀರ್ ತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್

ಸ್ಕೂಬಾ ಡೈವರ್ ಸಬೀರ್ ಬಕ್ಸ್ ಮತ್ತು ತಂಡವು ನೀರೊಳಗಿನಿಂದ ವಿರಾಟ್ ಕೊಹ್ಲಿಗೆ ವಿಶೇಷ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ.

ಇಂದು ವಿರಾಟ್ 34 ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿಶ್ವದಾದ್ಯಂತ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿವೆ.

ಅಂತಾರಾಷ್ಟ್ರೀಯ ಸ್ಕೂಬಾ ಡೈವರ್ ಸಬೀರ್ ಬಕ್ಸ್ ತಂಡ ವಿಶೇಷವಾಗಿ ವಿಷ್ ಮಾಡಿದೆ. ಕಟಕ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲು ವಿಶಿಷ್ಠವಾದ ಆಲೋಚನೆ ಮಾಡಿದ್ದು, ಸ್ಟಾರ್ ಬ್ಯಾಟ್ಸ್‌ಮನ್ ಚಿತ್ರವಿರುವ ಕೇಕ್ ಅನ್ನು ನೀರೊಳಗೆ ಕತ್ತರಿಸುವ ಮೂಲಕ ವಿರಾಟ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!