ಅಮೃತಯಾತ್ರೆ: ಪರಿಸರ ಸಂರಕ್ಷಣೆಗೆ ಒತ್ತು, ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ದೇಶದಲ್ಲಾಗಿರೋ ಪ್ರಯತ್ನಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಕಾಲದಲ್ಲಿ ಬ್ರಿಟೀಷರ ಬೇಟೆ ಸಂಸ್ಕೃತಿ ಇತ್ಯಾದಿಗಳಿಂದ ಹೇರಳವಾಗಿದ್ದ ಭಾರತದ ಕಾಡುಗಳು ಕಳೆಗುಂದಲಾರಂಭಿಸಿದ್ದವು. ಅಲ್ಲದೇ ಮಾನವನ ಅತಿಕ್ರಮಣದಿಂದಾಗಿ ದೇಶದ ಅರಣ್ಯ ಸಂಪತ್ತು ನಾಶವಾಗುತ್ತಿತ್ತು.

ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಆಸ್ಥೆವಹಿಸಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು. ನೈರ್ಗಿಕ ಕಾಡುಗಳಲ್ಲಿ ಮಾನವನ ಅಕ್ರಮ ಪ್ರವೇಶವನ್ನು ಮಟ್ಟಹಾಕಲು ಸಂರಕ್ಷಿತ ಪ್ರದೇಶಗಳ ಘೋಷಣೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಯಿತು. ಅರಣ್ಯವ್ಯಾಪ್ತಿಯ ಪ್ರದೇಶಗಳನ್ನು ಹೆಚ್ಚಿಸಲಾಯಿತು. 1980ರ ಹೊತ್ತಿಗೆ 6.39ಲಕ್ಷ ಚದರ್‌ ಕಿಲೋಮೀಟರ್‌ ಪ್ರದೇಶವು ಅರಣ್ಯವ್ಯಾಪ್ತಿಗೆ ಒಳಪಟ್ಟಿತ್ತು. ಕಳೆದ 3 ದಶಕಗಳಲ್ಲಿ 75,000 ಚ.ಕಿ.ಮೀ ಭೂಮಿಯನ್ನು ಅರಣ್ಯ ವ್ಯಾಪ್ತಿಗೆ ತರಲಾಗಿದೆ. 2021ರ ಹೊತ್ತಿಗೆ ದೇಶದಲ್ಲಿ ಒಟ್ಟೂ 7.14ಲಕ್ಷ ಚ.ಕಿಮಿ ಪ್ರದೇಶ ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆ. 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಒಟ್ಟೂ ಭೌಗೋಳಿಕ ಪರ್ದೇಶದಲ್ಲಿ 33 ಪ್ರತಿಶತಕ್ಕಿಂತ ಹೆಚ್ಚಿನ ಅರಣ್ಯ ವ್ಯಾಪ್ತಿಯನ್ನು ಹೊಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!