ಕಾಶ್ಮೀರದ ದಿ ಮೋಸ್ಟ್‌ ಫೇಮಸ್‌ ಖಾದ್ಯ ʻಹರಿಸಾ ಮಾಂಸʼ: ಚಳಿಗಾಲದ ರೆಸಿಪಿ ಅಂತಲೇ ಹೆಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇದೀಗ ಚಳಿಗಾಲ, ಈ ಸಮಯದಲ್ಲಿ ಜನ ಬಿಸಿ ಬಿಸಿ ಆಹಾರ, ಚಾಯ್‌, ಕಾಫಿ ಹಾಗೆ ವಿಧ ವಿಧ ರೆಸಿಪಿಗಳ ಮೊರೆ ಹೋಗೋದು ಸಹಜ. ಅದರಂತೆ ಸಾಂಪ್ರದಾಯಿಕ ಭಾರತದಲ್ಲಿ ಒಂದೊಂದು ಋತುಮಾನದಲ್ಲಿ ಒಂದೊಂದು ರೀತಿಯ ಖಾದ್ಯಕ್ಕೆ ಮಾನ್ಯತೆ ಇರುತ್ತದೆ. ಅಂತಯೇ ಈ ಕಾಶ್ಮೀರದ ದಿ ಮೋಸ್ಟ್‌ ಫೇಮಸ್‌ ಖಾದ್ಯ ʻಹರಿಸಾ ಮಾಂಸʼ.  ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಾದ್ರೆ ಬಜ್ಜಿ, ಬೋಂಡಾ, ಕಾಫಿ, ಟೀ, ಬಿಸಿ ಬಿಸಿ ಉಪ್ಪಿಟ್ಟು ಇತ್ಯಾದಿ..ಹೀಗೆ ಅಂತ ಹೇಳೋಕಾಗಲ್ಲ.. ಒಬ್ಬೊಬ್ಬರು.. ಒಂದೊಂದು ತಿಂಡಿ ಇಷ್ಟ ಪಡ್ತಾರೆ. ಆದ್ರೆ ಕಾಶ್ಮೀರದಲ್ಲಿ ಮಾತ್ರ ಚಳಿಗಾಲದಲ್ಲಿ ದಿ..ಮೋಸ್ಟ್‌ ಫೇವರಿಟ್‌ ಅಂಡ್‌ ಹಾಟ್‌ ಫುಡ್‌ ಅಂದ್ರೆ ಅದು ಹರಿಸಾ ಮಾಂಸ ಅಂತೆ…

ಜಮ್ಮ-ಕಾಶ್ಮೀರದಲ್ಲಿ ಚಳಿ ಅಂದರೆ ಊಹಿಸಕೊಳ್ಳಲಸಾಧ್ಯವಾದದ್ದು. ಅಂತಹ ಚಳಿ ತಡೆಯೋಕೆ ಅದೇ ಸೈಲಿಯ ಅಡುಗೆ ಬೇಕಲ್ವಾ ಹಾಗಾಗಿ ಈ ಹರಿಸಾ ಮಾಂಸವನ್ನು ಅಲ್ಲಿನ ಜನ ಹೆಚ್ಚಾಗಿ ಮಾಡ್ತಾರಂತೆ…ಈ ಖಾದ್ಯವನ್ನು ಕಾಶ್ಮೀರಿ ಕೇಸರಿ, ಆರೊಮ್ಯಾಟಿಕ್ ಮಸಾಲೆಗಳು, ಅಕ್ಕಿ, ಮಾಂಸ ಮತ್ತು ಉಪ್ಪಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಹೆಚ್ಚಿನ ಕ್ಯಾಲೋರಿ ಮತ್ತು ಪ್ರೊಟೀನ್ ಅಂಶಗಳಲನ್ನು ಒಳಗೊಂಡಿರುವುದರ ಜೊತೆಗೆ ಸುಲಭವಾಗಿ ಸೇವಿಸಿದ ಆಹಾರ ಜೀರ್ಣವಾಗುತ್ತೆ ಅಂತಾರೆ ಸ್ಥಳೀಯರು. ದೊಡ್ಡ ಮಣ್ಣಿನ ಪಾತ್ರೆಯಲ್ಲಿ ಇದನ್ನು ತಯಾರುಮಾಡಲಾಗುತ್ತಂತೆ. ರಾತ್ರಿಯಿಡೀ ಕಟ್ಟಿಗೆ, ಕೆಂಡಗಳಿಂದ ಬಿಸಿಯಾಗಿರುವಂತೆ ನೋಡಕೊಳ್ಳಲಾಗುತ್ತೆ.

ನಿಜವಾಗಿಯೂ ನೀವು ನಂಬಲೇಬೇಕು ಬೇರೆ ಎಲ್ಲಾ ಖಾದ್ಯಗಳು 2/3ಗಂಟೆಗಳಲ್ಲಿ ಮಾಡಿ ಮುಗಿಸಬಹುದು ಆದ್ರೆ ಒಂದು ರುಚಿಯಾದ, ಶುಚಿಯಾದ ಉತ್ತಮವಾದ ಹರಿಸಾ ತಯಾರಿಸಲು ಸುಮಾರು 17 ರಿಂದ 18 ಗಂಟೆ ಬೇಕಾಗುತ್ತದೆ. ಮೊದಲು ನೀವು ಅನ್ನ ತಯಾರಿಸಿ ಅದಕ್ಕೆ ಬೇಕಾಗಿರುವ ಎಲ್ಲಾ ಮಸಾಲೆಗಳನ್ನು ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಮಾಂಸವನ್ನು ಸೇರಿಸಲಾಗುತ್ತದೆ. ರಾತ್ರಿಯಿಡೀ ಕೆಂಡದ ಬಿಸಿಯಲ್ಲಿ ರಸಪಾಕವಾಗಿ ತಯಾರಾದ ಈ ಹರಿಸಾದಲ್ಲಿ ಹಾಕಿರುವ ಮಾಂಸದ ಮೂಳೆಗಳನ್ನು ಹೊರತೆಗೆಯಲಾಗುತ್ತದೆ.  ಬೆಳಿಗ್ಗೆ 4 ಗಂಟೆಗೆ ಎದ್ದು, ಮೂಳೆಗಳನ್ನು ಹೊರತೆಗೆಯುತ್ತೇವೆ. ಇದಕ್ಕೆಲ್ಲ ಸಾಕಷ್ಟು ಶ್ರಮ ಮತ್ತು ಸಮಯ ಬೇಕಾಗುತ್ತದೆ ಅಂತಾರೆ ಹರೀಸಾ ತಯಾರಕರು. ಅಲ್ಲಿ ನೆಲೆಸಿರುವ ಮೂಲ ಕಾಶ್ಮೀರಗಳಿಗೆ ಮಾತ್ರ ಇದರ ರುಚಿ, ಅಚ್ಚುಕಟ್ಟಾದ ತಯಾರಿಕಾ ವಿಧಾನ ಗೊತ್ತು.

ಈ ಖಾದ್ಯವು ಕಾಶ್ಮೀರಿಗಳಿಗೆ ಮಾತ್ರವಲ್ಲದೆ ಚಳಿಗಾಲದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ಪ್ರಿಯವಾಗಿದೆ. “ಜನರು ಈ ಖಾದ್ಯವನ್ನು ನಿಜವಾಗಿಯೂ ಇಷ್ಟಪಡ್ತಾರೆ, ವಿಶೇಷವಾಗಿ ಚಳಿಗಾಲದಲ್ಲಿ. ನಾವು ದೇಶಾದ್ಯಂತ ಗ್ರಾಹಕರನ್ನು ಹೊಂದಿದ್ದೇವೆ ಅಂತ ಹೆಮ್ಮೆಯಿಂದ ಹೇಳ್ತಾರೆ ತಯಾರಕ ಅಹ್ಮದ್.

ರುಚಿಗಷ್ಟೇ ಅಲ್ಲ, ಇದು ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು..ಮೈ ಕೈ ನೋವು ಇರುವವರಿಗೆ ಹರಿಸಾ ತಿನ್ನುವುದರಿಂದ ನೋವು ನಿವಾರಣೆಯಾಗುತ್ತದೆ, ದೇಹದ ಉಷ್ಣತೆಯನ್ನು ಶಮನ ಮಾಡುತ್ತದೆ ಮತ್ತು ಇತರ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಕೆಲವರು ಈ ಖಾದ್ಯವನ್ನು ಹತ್ತಿರದ ಬಂಧುಗಳಿಗೆ ಮತ್ತು ಆತ್ಮೀಯರಿಗೆ ಉಡುಗೊರೆಯಾಗಿ ಕಳುಹಿಸುತ್ತಾರಂತೆ..ಅಮೆರಿಕ, ಯುರೋಪ್ ಸೇರಿದಂತೆ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!