ಅಮೃತಯಾತ್ರೆ: ಜಲವಿದ್ಯುತ್‌ ಉತ್ಪಾದನೆಯಲ್ಲಿ ಭಾರತ ಬೆಳೆದ ಬಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ವಾತಂತ್ರ್ಯ ಬಂದು 75 ವರ್ಷಗಳ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತದ ಅಮೃತಯಾತ್ರೆಯಲ್ಲಿ ಮೆಚ್ಚಲೇಬೇಕಾದ ಅಂಶಗಳಲ್ಲಿ ಜಲವಿದ್ಯುತ್‌ ಉತ್ಪಾದನೆಯಲ್ಲಿ ದೇಶ ಸಾಧಿಸಿದ ಬೆಳವಣಿಗೆಯೂ ಒಂದು. ಭಾರತ ಇಂದು ಸ್ಥಾಪಿತ ಜಲವಿದ್ಯುತ್‌ ಉತ್ಪಾದನೆಯಲ್ಲಿ ಜಾಗತಿಕವಾಗಿ 5 ನೇ ಸ್ಥಾನದಲ್ಲಿದೆ.

ಭಾರತದ ನವೀಕರಿಸಬಹುದಾದ ಶಕ್ತಿಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ಕೀಲಿಕೈ ಜಲವಿದ್ಯುತ್.‌ 1961 ರ ಸಮಯದಲ್ಲಿ ಭಾರತವು ಕೇವಲ 20,723 GWh (gigawatt hour) ದಷ್ಟು ವಿದ್ಯುತ್‌ ಉತ್ಪಾದನೆ ಮಾಡುತ್ತಿತ್ತು. ಆದರೆ ಇದು 2021 ಹೊತ್ತಿಗೆ 1,50,300 GWh ಗೆ ತಲುಪಿದೆ. ಪೆಟ್ರೋಲಿಯಂ ನಿಕ್ಷೇಪಗಳು ಬರಿದಾಗುತ್ತ ಸಾಗುತ್ತಿರುವಾಗ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಮುಂದುವರೆತ್ತಿದೆ ಎಂಬುದಕ್ಕೆ ಸಾಕ್ಷಿಯಿದು. ಸದ್ಯಕ್ಕೆ ದೇಶದ ಅಷ್ಟೂ ಶಕ್ತಿ ಅಗತ್ಯತೆಯನ್ನು ನೀಗಿಸುವಷ್ಟಿಲ್ಲವಾದರೂ ವರ್ಷದಿಂದ ವರ್ಷಕ್ಕೆ ಉತ್ಪಾದನೆಯಲ್ಲಿನ ಹೆಚ್ಚಳ ಮುಂದಿನ ದಿನಗಳಲ್ಲಿ ಧನಾತ್ಮಕವಾಗಿ ಪರಿಣಮಿಸಬಲ್ಲ ಅಂಶ.

ಜಾಗತಿಕವಾಗಿ ತೈಲ ಬಿಕ್ಕಟ್ಟು ಎದುರಾಗಿ, ಜಾಗತಿಕ ತಾಪಮಾನ ಇತ್ಯಾದಿ ಸಮಸ್ಯೆಗಳಿಂದ ಜಗತ್ತು ಪರ್ಯಾಯ ಶಕ್ತಿ ಮೂಲಗಳತ್ತ ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಜಲವಿದ್ಯುತ್‌ ಉತ್ಪಾದನೆ ಕಾರ್ಬನ್‌ ಹೆಜ್ಜೆಗುರುತು ಕಡಿಮೆ ಮಾಡುವ ಭಾರತದ ಬದ್ಧತೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದೇನೋ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!