ಕ್ರಾಂತಿಕಾರಿಗಳನ್ನು ಹೊಗಳಿ ಕವನ ಪಠಿಸಿದ್ದಕ್ಕೆ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು ಛೈಲ್ ಬಿಹಾರಿ ಕಂಟಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
1931ರ ನವೆಂಬರ್ 17 ರಂದು ಉತ್ತರ ಪ್ರದೇಶದ ಕಾನ್‌ಪುರ್‌ ನ ತಿಲಕಭೂಮಿ ಶ್ರದ್ಧಾನಂದ ಪಾರ್ಕ್ ನಲ್ಲಿ ಲಾಲಾ ಲಜಪತ್ ರಾಯ್ ಅವರ ಪುಣ್ಯಸ್ಮರಣೆಯ ಸ್ಮರಣಾರ್ಥ ಪಟ್ಟಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಛೈಲ್ ಬಿಹಾರಿ ಕಂಟಕ್ ಅವರು ದೇಶಭಕ್ತಿ ಸಾರುವ ಕವಿತೆಯನ್ನು ವಾಚಿಸಿದರು. ಈ ಕವಿತೆಯಲ್ಲಿ ಸೈಮನ್ ಆಯೋಗದ ಪಂಜಾಬ್ ಭೇಟಿ, ಲಾಲಾಜಿ ಮೇಲೆ ಲಾಠಿ ಏಟಿನ ಕ್ರೌರ್ಯ, ಸೌಂಡರ್ಸ್ ಅವರ ಕೊಲೆ ಮತ್ತು ಅಂತಿಮವಾಗಿ ಮೂವರು ಅದಮ್ಯ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿದ ಘಟನೆಗಳ ಬಗ್ಗೆ ಮನಮುಟ್ಟುವಂತೆ ವರ್ಣಿಸಲಾಗಿತ್ತು.ಕ್ರಾಂತಿಕಾರಿಗಳು ದೇಶದ ಕತ್ತಲೆ ಮತ್ತು ಹತಾಶೆ ಭಾವಗಳನ್ನು ತೊಲಗಿಸಿ ಸ್ವಾತಂತ್ರ್ಯದ ಆಸೆ ಚಿಗುರಿಸಿದ್ದಾರೆ ಎಂದು ಹೇಳಲಾಗಿತ್ತು. ಛೈಲ್ ಬಿಹಾರಿ ಕಂಟಕ್ ಅವರು ತಮ್ಮ ಕವಿತೆಯಲ್ಲಿ ಮೂವರು ಕ್ರಾಂತಿಕಾರಿಗಳ ತ್ಯಾಗವನ್ನು ಹೊಗಳಿದ್ದರು. ಮತ್ತು ಅವರ ಕಾರ್ಯಗಳನ್ನು ವೈಭವೀಕರಿಸಿದ್ದರು ಮತ್ತು ಬ್ರಿಟೀಷ್ ಸರ್ಕಾರದ ನಾಶವನ್ನು ಪ್ರತಿಪಾದಿಸಿದ್ದರು. ಈ ಅಪರಾಧಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124-ಎ ಅಡಿಯಲ್ಲಿ ಚೈಲ್ ಬಿಹಾರಿ ಅವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ವಿಧಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!