ಅಮೃತಯಾತ್ರೆ: ಜಾನುವಾರುಗಳ ಸಂಖ್ಯೆಯಲ್ಲಿ ಹೆಚ್ಚಳ, 8 ಕೋಟಿ ಮನೆಗಳಿಗೆ ಜೀವನಾಧಾರವಾಗಿದೆ ಪಶುಸಾಕಾಣಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದಲ್ಲಿ ಪಶುಸಾಕಾಣಿಕೆ ಉದ್ಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ದೇಶದ 8 ಕೋಟಿ ಮನೆಗಳಿಗೆ ಪಶುಸಾಕಾಣಿಕೆಯು ಜೀವಾನಾಧಾರವಾಗಿದೆ. ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಪಶುಸಾಕಾಣಿಕೆ ಯನ್ನು ಉದ್ಯಮವನ್ನಾಗಿಸುವಲ್ಲಿ ನಿರಂತರ ಪ್ರಯತ್ನಗಳು ನಡೆದಿವೆ. ಪಶು ಇಲಾಖೆಗಳನ್ನು ಸ್ಥಾಪಿಸುವ ಮೂಲಕ ಜಾನುವಾರುಗಳನ್ನು ವ್ಯವಸ್ಥಿತವಾಗಿ ಸಾಕಣಿಕೆ ಮಾಡಲು ಹಲವಾರು ಪ್ರಯತ್ನಗಳನ್ನು ನಡೆಸಲಾಗಿದೆ. ಭಾರತದಲ್ಲಿ ಪಶುಸಾಕಾಣಿಕೆ ಉದ್ಯಮದ ಬೆಳವಣಿಗೆ ತಿಳಿದುಕೊಳ್ಳಬೇಕೆಂದರೆ ದೇಶದಲ್ಲಿ ಜಾನುವಾರುಗಳ ಸಂಖ್ಯೆಯಲ್ಲಾದ ಹೆಚ್ಚಳವನ್ನು ಗಮನಿಸಬೇಕು.

1951ರ ಹೊತ್ತಿಗೆ ದೇಶದಲ್ಲಿ 29 ಕೋಟಿಯಷ್ಟು ಜಾನುವಾರುಗಳಿದ್ದವು ಈ ಸಂಖ್ಯೆ ದ್ವಿಗುಣವಾಗಿ 2019ರ ಹೊತ್ತಿಗೆ 54 ಕೋಟಿಗೆ ತಲುಪಿದೆ. ಒಟ್ಟೂ ಜಾನುವಾರುಗಳ ಸಂಖ್ಯೆ 1951ರಿಂದೀಚೆಗೆ ಹೆಚ್ಚೂ ಕಡಿಮೆ ದ್ವಿಗುಣಗೊಂಡಿದೆ. ಪಶುಸಂಗೋಪನಾ ವಲಯವು 8 ಕೋಟಿ ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯವನ್ನು ಒದಗಿಸುತ್ತಿದೆ.

ಪಶುಸಾಕಾಣಿಕೆಯ ಅಭಿವೃದ್ಧಿ ಮತ್ತು ಪ್ರತಿ ಪಶುವಿನ ಉತ್ಪಾದಕತೆಯನ್ನು ದ್ವಿಗುಣಗೊಳಿಸಲು ಮತ್ತು ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಸೃಷ್ಟಿಸಲು 2014 ರಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಅನ್ನು ಪ್ರಾರಂಭಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!