Friday, February 23, 2024

ಅಮೃತಯಾತ್ರೆ: ಖಾದ್ಯ ತೈಲಗಳ ತಲಾ ಲಭ್ಯತೆಯಲ್ಲಿ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೃತಯಾತ್ರೆಯ ಸಂದರ್ಭದಲ್ಲಿ ಹೇಳಿಕೊಳ್ಳಬಹುದಾದ ಸಾಧನೆಗಳಲ್ಲಿ ಖಾದ್ಯ ತೈಲಗಳ ತಲಾ ಲಭ್ಯತೆಯಲ್ಲಿನ ಹೆಚ್ಚಳವೂ ಒಂದು. ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ ಅಡುಗೆ ಎಣ್ಣೆಯ ಉತ್ಪಾದನೆಯಲ್ಲಿ ಉಳಿದ ದೇಶಗಳಿಗೆ ಹೋಲಿಕೆ ಮಾಡಿದರೆ ಹಿಂದುಳಿದಿದೆ.

ಇಂದಿಗೂ ಮುಕ್ಕಾಲು ಭಾಗದಷ್ಟು ಖಾದ್ಯತೈಲಗಳನ್ನು ಭಾರತ ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ದೇಶೀಯ ಖಾದ್ಯ ತೈಲ ಉತ್ಪಾದನೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿರುವುದು.

1960-61 ಸಮಯದಲ್ಲಿ ಖಾದ್ಯ ತೈಲಗಳ ತಲಾ ಲಭ್ಯತೆಯು 3.20 ಕೆಜಿಗಳಷ್ಟಿತ್ತು. ಇದು 2020-21ರ ವೇಳೆಗೆ 19.7 ಕೆಜಿಗಳಷ್ಟಾಗಿದೆ. ಎಣ್ಣೆಬೀಜ ಉತ್ಪಾದನೆ, ಇಳುವರಿ ಮತ್ತು ಸಂಗ್ರಹಣೆಯಲ್ಲಿನ ಹೆಚ್ಚಳವು ತಲಾವಾರು ಲಭ್ಯತೆಯನ್ನೂ ಹೆಚ್ಚಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಮೂಲಕ ಆಮದನ್ನು ಕಡಿಮೆ ಮಾಡಿ ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ.

2021-22ರಲ್ಲಿ 384.98 ಲಕ್ಷ ಟನ್ ಎಣ್ಣೆಕಾಳುಗಳನ್ನು ಉತ್ಪಾದಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!