ಜಪಾನ್‌ನ ಹೃದಯಭಾಗದಲ್ಲಿದೆ ಕೇರಳದ ಸಂಪ್ರದಾಯಿಕ ‘ಚನಕತ್ ಹೌಸ್’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ ಹಳ್ಳಿಗಳಲ್ಲಿ ಅನೇಕ ಸಾಂಪ್ರದಾಯಿಕ ಮನೆಗಳನ್ನು ಲ್ಯಾಟರೈಟ್ ಇಟ್ಟಿಗೆಗಳು, ಟೆರಾಕೋಟಾ ಛಾವಣಿಗಳಿಂದ ನಿರ್ಮಿಸಲಾಗಿದೆ ಮತ್ತು ಖಾಸಗಿ ಈಜುಕೊಳದೊಂದಿಗೆ ವಿಶಾಲವಾದ ತೆರೆದ ಜಗುಲಿಯನ್ನು ಹೊಂದಿರುತ್ತದೆ. ಇಂತಹದ್ದೇ ಸಾಂಪ್ರದಾಯಿಕ ಮನೆಯೊಂದು ಜಪಾನ್‌ನ ಹೃದಯಭಾಗದಲ್ಲಿ ನಿರ್ಮಿಸಲಾಗಿದೆ.

ಜಪಾನ್‌ನ ಇನುಯಾಮಾದಲ್ಲಿರುವ ಲಿಟಲ್ ವರ್ಲ್ಡ್ ಮ್ಯೂಸಿಯಂ ಆಫ್ ಮ್ಯಾನ್, ಮಾನವಶಾಸ್ತ್ರೀಯ ವಸ್ತುಸಂಗ್ರಹಾಲಯ ಮತ್ತು ಮನೋರಂಜನಾ ಉದ್ಯಾನವನವಾಗಿದ್ದು, ಪ್ರವಾಸಿಗರು ವಿವಿಧ ದೇಶಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಈ ಕೇರಳ ಶೈಲಿಯ ಮನೆಯು ಭಾರತವನ್ನು ಪ್ರತಿನಿಧಿಸುವ ಪ್ರದರ್ಶನವಾಗಿದೆ.

ಮ್ಯೂಸಿಯಂನಲ್ಲಿರುವ ಮನೆಗೆ ‘ಚನಕತ್ ಹೌಸ್’ ಎಂದು ಹೆಸರಿಸಲಾಗಿದೆ ಮತ್ತು ಇದು ಕೇರಳದ ನಿಜವಾದ ಮನೆಯ ಪ್ರತಿರೂಪವಾಗಿದೆ. ಇದನ್ನು, ಜಪಾನ್‌ಗೆ ರವಾನಿಸಲಾದ ಸ್ಥಳೀಯ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಒಳಗೆ, ಉದ್ದನೆಯ ಜಗುಲಿ, ಒಳ ಅಂಗಳ ಮತ್ತು ಸಾಂಪ್ರದಾಯಿಕ ಅಡಿಗೆ ಪಾತ್ರೆಗಳು ಮತ್ತು ಚಾರು ಕಸೆರಾ (ಒರಗಿರುವ ಕುರ್ಚಿ) ನಂತಹ ಪೀಠೋಪಕರಣಗಳನ್ನು ಕಾಣಬಹುದು. ಇದಲ್ಲದೆ, ಮಲಯಾಳಂನಲ್ಲಿ ಬರೆಯಲಾದ ಸೈನ್‌ಬೋರ್ಡ್‌ಗಳು ಮತ್ತು ಹಳ್ಳಿಯ ನೋಟವನ್ನು ಪೂರ್ಣಗೊಳಿಸಲು ಭಾರತೀಯ ಅಂಚೆ ಕಚೇರಿಗಳಿವೆ.

ಈ ಮ್ಯೂಸಿಯಂನಲ್ಲಿ ಪ್ರತಿಯೊಂದು ದೇಶದ ವಿಶಿಷ್ಟ ಸಂಪ್ರದಾಯಿಕ ವಸ್ತು ಅಥವಾ ವಿಷಯವೊಂದನ್ನು ಪ್ರಸ್ತುತಪಡಿಸುತ್ತದೆ. ಅಂತೆಯೇ ಇಲ್ಲಿ ಕೇರಳದ ಹಳೆ ಸಂಪ್ರದಾಯಿಕ ಪದ್ದತಿಯನ್ನು ಕಟ್ಟಿದ ಮನೆಗೆ ವಿಶಿಷ್ಟ ಸ್ಥಾನವನ್ನು ಕಲ್ಪಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ನಮ್ಮ ವಾಸ್ತುಶಿಲ್ಪದ ಬಗ್ಗೆ ಅರಿಯಲು ಅನುವು ಮಾಡಿಕೊಟ್ಟಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!