ಅಮೃತಯಾತ್ರೆ: ಲಿಂಗ ಅನುಪಾತದಲ್ಲಿ ಹೆಚ್ಚಳವಾಗಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹೆಣ್ಣು ಮಗು ಜನಿಸಿದರೆ ಅಸಡ್ಡೆಯಿಂದ ನೋಡುವ ಮನಸ್ಥಿತಿಯಿಂದ ಹೊರಬಂದು ಸ್ವಾತಂತ್ರ್ಯದ ಅಮೃತಮಹೋತ್ಸವದ ಹೊತ್ತಿಗೆ ಸ್ತ್ರೀ-ಪುರುಷ ಲಿಂಗಾನುಪಾತದಲ್ಲಿ ಏರಿಕೆ ಸಾಧಿಸಿದ್ದು ಕೂಡ ನೆನೆಯಲೇ ಬೇಕಾದ ಸಾಧನೆಗಳಲ್ಲೊಂದು. ಹೆಣ್ಣು ಮಗು ಜನಿಸಿದರೆ ಅನಿಷ್ಟವೆಂದು ಪರಿಗಣಿಸೋ ಕಾಲವೊಂದಿತ್ತು. ಹೆಣ್ಣು ಮಗು ಹುಟ್ಟೋದಕ್ಕೂ ಮೊದಲೇ ಭ್ರೂಣದಲ್ಲಿರುವಾಗಲೇ ಆ ಕುಡಿಯನ್ನು ಹೊಸಕಿ ಹಾಕುವ ಅನಿಷ್ಟ ಪದ್ಧತಿಗಳೂ ರೂಢಿಯಲ್ಲಿತ್ತು ಪರಿಣಾಮ ಲಿಂಗ ಅಸಮಾನತೆ ಏರಿಕೆಯಾಗಿತ್ತು.

1992-93ರಲ್ಲಿ ಸಾವಿರ ಪುರುಷರಿಗೆ ಮಹಿಳೆಯರ ಅನುಪಾತವು 944 ರಷ್ಟಿತ್ತು. ಈ ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿತು. ಭ್ರೂಣ ಲಿಂಗ ಪತ್ತೆ ನಿಷೇಧ. ಹೆಣ್ಣು ಮಗ್ಉ ಹುಟ್ಟಿದರೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಘೋಷಿಸಲಾಯಿತು. ಲಿಂಗ ಅಸಮಾನತೆಯು ಸಾಮಾಜಿಕ ವ್ಯವಸ್ಥೆಯ ಮೇಲೆ ಹೇಗೆಲ್ಲಾ ದುಷ್ಪರಿಣಾಮ ಬೀರುತ್ತದೆ ಎಂಬ ಕುರಿತು ತಿಳುವಳಿಕೆ ಮೂಡಿಸಲಾಯಿತು. ಪರಿಣಾಮ ಈ ಲಿಂಗ ಅಸಮಾನತೆ ಕಾಲ ಕ್ರಮೇಣ ಕಡಿಮೆಯಾಯಿತು. 2019-21ರ ನಡುವೆ ಲಿಂಗಾನುಪಾತದಲ್ಲಿ ಏರಿಕೆಯಾಗಿ ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ 1020ಕ್ಕೆ ತಲುಪಿದೆ. ಆಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ತಲೆದೂರಬಹುದಾಗಿದ್ದ ಏರುಪೇರುಗಳನ್ನು ತಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!