ದಿನಭವಿಷ್ಯ| ಅದೃಷ್ಟ ಇಂದು ನಿಮ್ಮ ಜತೆಗಿದೆ, ಕಾರ್ಯದಲ್ಲಿ ಯಶಸ್ಸು ಕಾಣುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಉತ್ಸಾಹಪೂರ್ಣ ದಿನ. ಸಣ್ಣಪುಟ್ಟ ಹಿನ್ನಡೆಗಳು ನಿಮ್ಮ ಉಲ್ಲಾಸಕ್ಕೆ ಭಂಗ ತರಲಾರವು. ಆತ್ಮೀಯ ಬಂಧುಗಳ ಜತೆ ಒಡನಾಟ. ಖರೀದಿ ಹುಮ್ಮಸ್ಸು.

ವೃಷಭ
ಅದೃಷ್ಟ ಇಂದು ನಿಮ್ಮ ಜತೆಗಿದೆ. ಹಾಗಾಗಿ ಕಾರ್ಯದಲ್ಲಿ ಯಶಸ್ಸು. ಕಠಿಣ ಪರಿಸ್ಥಿತಿ ಸುಗಮವಾಗಿ ಅಂತ್ಯ ಕಾಣುವುದು. ಎಲ್ಲರ ಸಹಕಾರ ಲಭ್ಯ.

ಮಿಥುನ
ಗುಣಾತ್ಮಕ ಮನೋಭಾವ ಬೆಳೆಸಿಕೊಂಡರೆ ಎಲ್ಲವೂ ಒಳ್ಳೆದಾಗುವುದು. ನೆಗೆಟಿವ್ ಚಿಂತನೆ ಬಿಟ್ಟುಬಿಡಿ. ಪ್ರೀತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ.

ಕಟಕ
ಕುಟುಂಬ, ಸ್ನೇಹಿತರು ಎಲ್ಲರಿಂದಲೂ ಟೀಕೆ ಕೇಳುವಿರಿ. ಒತ್ತಡದ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ಕಲಿಯಿರಿ.

ಸಿಂಹ
ಪ್ರಮುಖ ವಿಷಯದಲ್ಲಿ ಮಹತ್ವದ ನಿರ್ಧಾರ. ಇದು ನಿಮ್ಮ ದೀರ್ಘಾವಧಿ ಯೋಜನೆ ಮೇಲೆ ಪರಿಣಾಮ ಬೀರುವುದು. ಕೌಟುಂಬಿಕ ಭಿನ್ನಮತ.

ಕನ್ಯಾ
ಸಂತೋಷದ ಮನಸ್ಥಿತಿ. ಎಲ್ಲರೊಡನೆ ಹರ್ಷದಿಂದ ಬೆರೆಯುವಿರಿ. ಆದರೆ ಕ್ಷುಲ್ಲಕ ವಿಷಯಕ್ಕೆ ಕೆಲವರ ಜತೆ ವಾಗ್ವಾದ ನಡೆದೀತು.

ತುಲಾ
ಸಾಮಾಜಿಕ, ಆರ್ಥಿಕ ಮತ್ತು ಖಾಸಗಿ ಬದ್ಧತೆಗಳನ್ನು ಇಂದು ಪೂರೈಸಿ. ಯಾವುದನ್ನೂ ಬಾಕಿ ಇಡಬೇಡಿ. ಆರೋಗ್ಯ ಸಮಸ್ಯೆ ಕಾಡಬಹುದು.

ವೃಶ್ಚಿಕ
ಹೊಸ ವಿಷಯಕ್ಕೆ ತುಡಿಯುವಿರಿ. ಬದುಕಲ್ಲಿ ಬದಲಾವಣೆ ತರುವುದು ನಿಮ್ಮ ಉದ್ದೇಶ. ಆದರೆ ಅದು ಸುಲಭದಲ್ಲಿ ಸಾಧ್ಯವಾಗದು. ಆರ್ಥಿಕ ಒತ್ತಡ ಹೆಚ್ಚಳ.

ಧನು
ಖಾಸಗಿ ಬದುಕಿನಲ್ಲಿ ಪ್ರಮುಖ ಬೆಳವಣಿಗೆ. ಇತರರ ಒತ್ತಡಕ್ಕೆ ಬಲಿಯಾಗಿ ನಿರ್ಧಾರ ತಾಳದಿರಿ. ಇದರ ಜತೆಗೇ ಹಣದ ಸಮಸ್ಯೆ ಎದುರಿಸುವಿರಿ.

ಮಕರ
ನಿಮ್ಮದೇ ವೈಯಕ್ತಿಕ ವಿಚಾರದಲ್ಲಿ ಮುಳುಗಿ  ನಿಮ್ಮ ಸುತ್ತಲಿನ ಬೆಳವಣಿಗೆ ಬಗ್ಗೆ ಕುರುಡಾಗುವಿರಿ. ಅವು ನಿಮ್ಮ ಮೇಲೂ ಪರಿಣಾಮ ಬೀರಲಿವೆ.

ಕುಂಭ
ಸಂತೋಷದಿಂದ ದಿನ ಕಳೆಯುವ ಉದ್ದೇಶವಾದರೂ ನಿಮ್ಮ ಮನಸ್ಸು ಕೆಡಿಸುವಂತಹ ಬೆಳವಣಿಗೆ ಉಂಟಾದೀತು. ಸಹನೆ ಕಾಯ್ದುಕೊಳ್ಳಿ.

ಮೀನ
ವೈಯಕ್ತಿಕ ಬದುಕಿನಲ್ಲಿ ಕೆಲವು ಅನಿರೀಕ್ಷಿತ ಬೆಳವಣಿಗೆ. ನಿಮ್ಮ ಕಾರ್ಯದಲ್ಲಿ ಹೆಚ್ಚು ಶ್ರಮ ಹಾಕಬೇಕು. ಇಲ್ಲವಾದಲ್ಲಿ ಬಯಸಿದ ಫಲಿತಾಂಶ ಸಿಗದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!