Sunday, February 5, 2023

Latest Posts

ಅಮೃತಯಾತ್ರೆ: ʼಐಐಎಂʼಗಳ ಮೂಲಕ ಹೊಸತಲೆಮಾರಿನ ವ್ಯಾಪಾರ ನಾಯಕರನ್ನು ಹುಟ್ಟುಹಾಕುತ್ತಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯ ಬಂದು 75 ವರ್ಷಗಳಾಗುವಷ್ಟರ ಹೊತ್ತಿಗೆ ಭಾರತ ಜಾಗತಿಕ ಮಟ್ಟದಲ್ಲಿ ಮನ್ನಣೆಗಳಿಸುತ್ತಿದೆ. ದೇಶದ ಅಭಿವೃದ್ಧಿಯತ್ತ ಗಮನ ಕೊಡುತ್ತ ಹೊಸತಲೆಮಾರಿನ ವ್ಯಾಪಾರಿ ನಾಯಕರನ್ನು ಭಾರತ ಹುಟ್ಟುಹಾಕುತ್ತಿದೆ. ಇಂದು ಜಗತ್ತಿನ ಬಹುತೇಕ ದೊಡ್ಡ ದೊಡ್ಡ ಕಂಪನಿಗಳನ್ನು ಭಾರತೀಯರು ಆಳುತ್ತಿದ್ದಾರೆ. ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿಯೂ ಜಗತ್ತಿನಾದ್ಯಂತ ಭಾರತೀಯರು ನೆಲೆಸಿದ್ದಾರೆ. ದೇಶದಲ್ಲಿ ಹೊಸ ತಲೆಮಾರಿನ ನಾಯಕರುಗಳನ್ನು ಹುಟ್ಟುಹಾಕಲೆಂದೇ ವಿಶೇಷ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ (IIM) ಕೂಡ ಒಂದು.

ದೇಶದಲ್ಲಿ ಒಟ್ಟೂ 20 ರಾಜ್ಯಗಳಲ್ಲಿ 20 ಐಐಎಂಗಳಿವೆ. ಕಳೆದೊಂದು ದಶಕದಲ್ಲಿಯೇ ಒಟ್ಟೂ 10 ಐಐಎಂಗಳನ್ನು ನಿರ್ಮಿಸಲಾಗಿದೆ. ಆ ಮೂಲಕ ವ್ಯಾಪಾರ ನಿರ್ವಹಣಾ ಕ್ಷೇತ್ರದಲ್ಲಿ ಜಾಗತಿಕನಾಯಕನಾಗ ಹೊರಟಿದೆ ಭಾರತ. ಭಾರತದ ಮಾಜಿ ಆರ್‌ಬಿಐ ಗವರ್ನರ್‌ ಆಗಿರುವ ರಘುರಾಮ್‌ ರಾಜನ್‌, ಮಾಸ್ಟರ್‌ ಕಾರ್ಡ್‌ ನ ಜಾಗತಿಕ ಸಿಇಒ ಅಜಯ್‌ ಭಂಗಾ, ಪೆಪ್ಸಿಕೋದ ಜಾಗತಿಕ ಮುಖ್ಯಸ್ಥೆ ಇಂದಿರಾ ನೂಯಿ, ಮೇಕ್‌ ಮೈ ಟ್ರಿಪ್‌ ನ ಸಿಇಒ ದೀಪ್‌ ಕಲ್ರಾ, ಅಷ್ಟೇ ಏಕೆ ಹೆಸರಾಂತ ಬರಹಗಾರ ಚೇತನ್‌ ಭಗತ್‌, ಹಾಗೆಯೇ ಶಾರ್ಕ್‌ ಟ್ಯಾಂಕ್‌ ಮೂಲಕ ಪ್ರಸಿದ್ಧವಾಗಿರೋ ಹೆಡ್‌ಫೋನ್‌ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸಿರೋ ಬೋಟ್‌ ಅನ್ನು ಹುಟ್ಟುಹಾಕಿದ ಅಮನ್‌ ಗುಪ್ತಾ ಇವರೆಲ್ಲರೂ ಐಐಎಂ ನ ವಿದ್ಯಾರ್ಥಿಗಳೇ. ಇಂದು ಜಗತ್ತಿನಾದ್ಯಂತ ವ್ಯಾಪಾರ ಕ್ಷೇತ್ರದಲ್ಲಿ ಹೆಸರುಗಳಿಸಿ ದೇಶಕ್ಕೂ ಕೀರ್ತಿ ತಂದಿದ್ದಾರೆ. ಇವರೆಲ್ಲರನ್ನೂ ಹುಟ್ಟು ಹಾಕಿದ್ದು ಐಐಎಂ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!