Saturday, January 28, 2023

Latest Posts

ಸ್ವಾತಂತ್ರ್ಯ ಹೋರಾಟಕ್ಕಾಗಿ ʼರಾಮಸೈನ್ಯʼ ಕಟ್ಟಿದ್ದರು ಕ್ರಾಂತಿಕಾರಿ ಗೋಪಾಲ ಕೃಷ್ಣಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವಿಶೇಷ)
ದುಗ್ಗಿರಾಳ ಗೋಪಾಲ ಕೃಷ್ಣಯ್ಯನವರು ಅತ್ಯಂತ ಪ್ರಖ್ಯಾತ ಕವಿ, ವಾಗ್ಮಿ, ಗೀತರಚನೆಕಾರ, ತತ್ವಜ್ಞಾನಿ, ಗಾಯಕ ಮತ್ತು ಸ್ವಾತಂತ್ರ್ಯಕ್ಕಾಗಿ ದುಡಿದ ಅಸಾಧಾರಣ ಕ್ರಾಂತಿಕಾರಿ. ಆಂಧ್ರದಲ್ಲಿ ಸ್ವಾತಂತ್ರ್ಯ ಚಳುವಳಿಗಾಗಿ ಅವರ ಅನುಕರಣೀಯ ಕೆಲಸ ಮತ್ತು ತ್ಯಾಗಕ್ಕಾಗಿ, ಜನರು ಪ್ರೀತಿಯಿಂದ ‘ಆಂಧ್ರ ರತ್ನ’ ಎಂಬ ಹೆಸರನ್ನು ನೀಡಿ ಗೌರವಿಸಿದ್ದಾರೆ.
ಗೋಪಾಲ ಕೃಷ್ಣಯ್ಯನವರು ಶ್ರೀರಾಮನ ಅಪ್ಪಟ ಭಕ್ತರಾಗಿದ್ದರು ಮತ್ತು ಸ್ವರಾಜ್ಯಕ್ಕಾಗಿ ಕೆಲಸ ಮಾಡಲು ʼರಾಮ ದಂಡುʼ (ರಾಮನ ಸೈನ್ಯ) ಎಂಬ ಕಾರ್ಯಕರ್ತರ ಗುಂಪನ್ನು ಸಂಘಟಿಸಿದರು. 1921 ರಲ್ಲಿ ವಿಜಯವಾಡದಲ್ಲಿ ಕಾಂಗ್ರೆಸ್ ತನ್ನ ವಾರ್ಷಿಕ ಅಧಿವೇಶನವನ್ನು ನಡೆಸಿತು, ಅದು ಯಶಸ್ವಿಯಾಗಿ ನಡೆಯುವಲ್ಲಿ ರಾಮ ದಂಡು ಪ್ರಮುಖ ಪಾತ್ರ ವಹಿಸಿತು. ಆಂಧ್ರದಲ್ಲಿ ನಡೆದ ಅಸಹಕಾರ ಚಳವಳಿಯ ಮೂರು ಕಂತುಗಳು ಇಡೀ ದೇಶದ ಗಮನ ಸೆಳೆದವು. ಅದರಲ್ಲಿ ಮೊದಲನೆಯದು ದುಗ್ಗಿರಾಳ ಗೋಪಾಲ ಕೃಷ್ಣಯ್ಯನವರ ನೇತೃತ್ವದ ಚಿರಾಳ-ಪೇರಾಳ ಚಳವಳಿ. ಮದ್ರಾಸ್ ಪ್ರೆಸಿಡೆನ್ಸಿಯ ವಸಾಹತುಶಾಹಿ ಸರ್ಕಾರವು ಗುಂಟೂರು ಜಿಲ್ಲೆಯ ಚಿರಾಲ ಮತ್ತು ಪೇರಲ ಗ್ರಾಮಗಳನ್ನು ಪುರಸಭೆಯನ್ನಾಗಿ ಮಾಡುವ ನಿರ್ಧಾರವನ್ನು ವಿರೋಧಿಸಿ ಗೋಪಾಲ ಕೃಷ್ಣಯ್ಯನವರು ಸತ್ಯಾಗ್ರಹ ನಡೆಸಿದರು. ಪ್ರಬಲ ವಾಗ್ಮಿಯಾಗಿದ್ದ ಅವರು ಆಂಧ್ರ ವಿದ್ಯಾ ಪೀಠ ಗೋಷ್ಠಿ, ಸಾಹಿತ್ಯ ಸಂಘವನ್ನು ಸ್ಥಾಪಿಸಿದರು. ಆದರೆ ಅವರ ಸಾಹಿತ್ಯಿಕ ಪ್ರತಿಭೆಗಳಿಗಿಂತಲೂ ಹೆಚ್ಚಾಗಿ ಸ್ವಾತಂತ್ರಕ್ಕಾಗಿ ಅವರು ನಡೆಸಿದ ಹೋರಾಟಗಳು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!