ಅಮೃತಯಾತ್ರೆ: ಕಳೆದ 20 ವರ್ಷಗಳಲ್ಲಿ 7 ಪಟ್ಟು ಹೆಚ್ಚಿದೆ ಭಾರತದ ವಾರ್ಷಿಕ ತಲಾ ಆದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಸಾಧನೆಗಳಲ್ಲಿ ಮುಂಚೂಣಿಯಲ್ಲಿರುವುದೆಂದರೆ ವಾರ್ಷಿಕ ತಲಾ ವರಮಾನದಲ್ಲಿ ಸಾಧಿಸಿರೋ ಹೆಚ್ಚಳ.

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅಂದರೆ 1950-51 ವರ್ಷದಲ್ಲಿ ಭಾರತದ ವಾರ್ಷಿಕ ತಲಾ ಆದಾಯ ಎಷ್ಟಿತ್ತು ಎಂದು ಕೇಳಿದರೆ ನೀವು ಅಚ್ಚರಿ ಪಡುತ್ತೀರಿ. ಏಕೆಂದರೆ ಆ ಸಂದರ್ಬದಲ್ಲಿದ್ದ ವಾರ್ಷಿಕ ತಲಾ ಆದಾಯ ಕೇವಲ 265 ರುಪಾಯಿಗಳು ಮಾತ್ರ. ಇದರಿಂದಾಗಿ ಬಡತನ ಭಾರತದಲ್ಲಿ ತಾಂಡವವಾಡುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಪ್ರತಿ ವ್ಯಕತಿಯ ತಲಾ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ತಲಾ ಆದಾಯ ಹೆಚ್ಚುವಂತೆ ಮಾಡಿತು.

ಇದು 2020-21ರ ಹೊತ್ತಿಗೆ 1,28,829 ರುಪಾಯಿಗೆ ತಲುಪಿದೆ. ಅಂದರೆ ಸ್ವಾತಂತ್ರ್ಯದ ನಂತರ ಸುಮಾರು 500 ಪಟ್ಟು ಬೆಳವಣಿಗೆ ದಾಖಲಿಸಿದೆ. ಅದರಲ್ಲೂ 2000ನೇ ಇಸವಿಯಿಂದ ಇಲ್ಲಿಯವರೆಗೆ 20 ವರ್ಷಗಳಲ್ಲಿ 7 ಪಟ್ಟು ಹೆಚ್ಚಳವಾಗಿದೆ ವಾರ್ಷಿಕ ತಲಾ ಆದಾಯ.

ಹಣದುಬ್ಬರವನ್ನು ನಿಯಂತ್ರಿಸಲು ತೆಗುಕೊಂಡ ಕ್ರಮಗಳು, ದೇಶ ಮೂಲೆ ಮೂಲೆಗಳನ್ನೂ ಬ್ಯಾಂಕಿಂಗದ ವ್ಯವಸ್ಥೆಯ ಮೂಲಕ ಜೋಡಿಸಿ ಉಳಿತಾಯ ಹೆಚ್ಚುವಂತೆ ಮಾಡುವ ಮೂಲಕ ತಲಾ ಆದಾಯ ಹೆಚ್ಚಿಸುವಲ್ಲಿ ಶ್ರಮ ವಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!