ಭಾರತದ ಈ 6 ಫ್ಯಾಷನ್ ವಿನ್ಯಾಸಗಳಿಗಿದೆ ಜಾಗತಿಕ ವರ್ಚಸ್ಸು, ಇಲ್ಲಿದೆ ಸ್ವಾರಸ್ಯಕರ ಚರಿತ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಾದ್ಯಂತ ಕುಶಲಕರ್ಮಿಗಳಿಂದ ರಚಿಸಲಾದ ಯಾವುದೇ ಬಟ್ಟೆಯನ್ನು ತೆಗೆದುಕೊಂಡಾಗ ಅದರ ಮೇಲೆ ಮುದ್ರಿಸಲಾದ ಅಲಂಕಾರಿಕ ವಿನ್ಯಾಸಗಳನ್ನು ಗಮನಿಸಿದರೆ, ಪ್ರತಿಯೊಂದರ ಹಿಂದೆಯೂ ಒಂದೊಂದು ಕಥೆಯಿದೆ. ಭಾರತದ ಸಂಪ್ರದಾಯಿಕತೆಗೆ ಹೆಸರಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಕೆಲ ವಿನ್ಯಾಸಗಳ ಪರಿಚಯ ಮಾಡಿಕೊಳ್ಳುವುದಾದರೆ ಎಲ್ಲವೂ ಹಿಂದಿನ ಪರಂಪರೆಗಳಿಂದ ನೇಯಲ್ಪಟ್ಟಿದೆ ಎಂಬುದು ಅರ್ಥವಾಗುತ್ತದೆ.

1. ಇಂಡಿಯೆನ್: ಫ್ರಾನ್ಸ್‌ನ ಪ್ರೊವೆನ್ಸ್‌ನ ಮಾರುಕಟ್ಟೆಗಳಲ್ಲಿ ಅಡ್ಡಾಡಲು ನಿಮಗೆ ಎಂದಾದರೂ ಅವಕಾಶವಿದ್ದರೆ, ಅಲ್ಲಿ ಪ್ರಾಬಲ್ಯ ಹೊಂದಿರುವ ಫ್ಯಾಬ್ರಿಕ್ ಪ್ರಿಂಟ್ ಅನ್ನು ಒಮ್ಮೆ ನೀವು ನೋಡಿ. ಪ್ರಕೃತಿಯಿಂದ ಸ್ಫೂರ್ತಿ ಪಡೆದ ಈ ಮುದ್ರಣಗಳು ಲೆಸ್ ಇಂಡಿಯೆನ್ಸ್ ಎಂಬ ಹೆಸರಿನಿಂದ ಮಾರಾಟವಾಗುತ್ತವೆ. ಇದನ್ನು ಇಂಗ್ಲಿಷ್‌ನಲ್ಲಿ ‘ದಿ ಇಂಡಿಯನ್ಸ್’ ಎಂದು ಅನುವಾದಿಸಲಾಗುತ್ತದೆ.

ದಂತಕಥೆಯ ಪ್ರಕಾರ ಅರ್ಮೇನಿಯನ್ನರು ಭಾರತದಿಂದ ಮಾರ್ಸೆಲೆಗೆ ಬಟ್ಟೆಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದರು. ಕೂಡಲೇ ರಾಜ ಲೂಯಿಸ್ XIV ಇವುಗಳಿಗೆ ಅಲಂಕಾರಿಕ ವಿನ್ಯಾಸಗಳನ್ನು ತಯಾರಿಸುವಂತೆ ಮನವಿ ಮಾಡಿ ಅವುಗಳನ್ನು ತನ್ನ ರಾಜ್ಯಕ್ಕೆ ಆಮದು ಮಾಡಿಕೊಂಡನಂತೆ.

ಅರ್ಮೇನಿಯನ್ನರು ತಮ್ಮ ಕಲ್ಪನೆಯು ಜನಪ್ರಿಯವಾಗುತ್ತಿದ್ದಂತೆ ವಿನ್ಯಾಸಗಳನ್ನು ಪುನರಾವರ್ತಿಸಲು ಮತ್ತು ಅವುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು. ಸೂರ್ಯಕಾಂತಿ ಮತ್ತು ನೀಲಿಬಣ್ಣದ ಛಾಯೆಗಳೊಂದಿಗೆ ವರ್ಣರಂಜಿತ ಮುದ್ರಣಗಳು ಶೀಘ್ರದಲ್ಲೇ ಪ್ರೊವೆನ್ಸ್ ಪ್ರದೇಶದಲ್ಲಿ ಯಶಸ್ವಿಯಾದವು.

Indienne - Wikipedia

2. ಚಿಂಟ್ಜ್:  ಚಿಂಟ್ಜ್ ವಿನ್ಯಾಸ ಹೊಂದಿರುವ ಬಟ್ಟೆಗಳ ಮೇಲಿನ ಚಿತ್ರಣಗಳನ್ನು ನೀವು ಎಚ್ಚರಿಕೆಯಿಂದ ಗಮನಿಸಿದರೆ, ಎದ್ದುಕಾಣುವ ಅಂಶವಿದೆ. ಸಾಮಾನ್ಯ ಕಲಾ ಪ್ರಕಾರಗಳು, ಮರದ ಲಕ್ಷಣಗಳು ಜಾನಪದ ಕಥೆಗಳನ್ನು ಚಿತ್ರಿಸಲಾಗಿದೆ.

ಬ್ರಿಟಿಷರು ಈ ಲಕ್ಷಣಗಳಿಂದ ಹೆಚ್ಚು ಪ್ರೇರಿತರಾಗಿ ಹೆಸರನ್ನು ಕಲಾಮರಿಯಿಂದ ಚಿಂಟ್ಜ್ ಎಂದು ಬದಲಾಯಿಸಲಾಯಿತು – ಚಿಂಟ್ಜ್ ಎಂಬುದು ‘ಮಚ್ಚೆಯುಳ್ಳ ಚಿತ್ತಾರ’ ಭಾರತೀಯ ಪದ.

Chintz - Wikipedia

3. ಇಕಾತ್: ಅಜಂತಾ ಎಲ್ಲೋರಾ ಗುಹೆಗಳಲ್ಲಿನ ಐದನೇ ಶತಮಾನದ ಗೋಡೆಯ ಹಸಿಚಿತ್ರಗಳಲ್ಲಿ ಇದನ್ನು ನೋಡಬಹುದು. ಅದರ ಹೆಸರು ಇಂಡೋನೇಷಿಯನ್ ಪದದಲ್ಲಿ ಮೂಲವನ್ನು ಹೊಂದಿದ್ದು, ಇದರರ್ಥ ‘ಟೈ’ ಮಾಡುವುದು.

ಬಟ್ಟೆಯ ಮೇಲೆ ವಿನ್ಯಾಸವನ್ನು ನೇಯ್ಗೆ ಮಾಡುವ ಬದಲು, ಎಳೆಗಳನ್ನು ಲಂಬವಾದ ವ್ಯವಸ್ಥೆಗಳಲ್ಲಿ ಸುತ್ತಿಡಲಾಗುತ್ತದೆ ಮತ್ತು ರೆಸಿಸ್ಟ್ ಡೈಯಿಂಗ್ ಎಂಬ ಪ್ರಕ್ರಿಯೆಯು ವಿನ್ಯಾಸವನ್ನು ಉತ್ಪಾದಿಸುತ್ತದೆ.

Ikat The World Over - ClothRoads

4. ಸೀರ್ಸಕರ್

ಈ ಹೆಸರು ಪರ್ಷಿಯನ್ ನುಡಿಗಟ್ಟು ಶಿರ್-ಒ-ಶಖರ್‌ನಿಂದ ಹುಟ್ಟಿಕೊಂಡಿದೆ, ಇದರರ್ಥ “ಹಾಲು ಮತ್ತು ಸಕ್ಕರೆ”. ಉತ್ಪಾದನೆಯ ಸಮಯದಲ್ಲಿ, ವಿಭಿನ್ನ ಒತ್ತಡಗಳಲ್ಲಿ ಎರಡು ಥ್ರೆಡ್ ಬಣ್ಣಗಳನ್ನು ಮಗ್ಗದ ಮೇಲೆ ಹಾಕಲಾಗುತ್ತದೆ.

ಇದು ಪರ್ಯಾಯ ಬಣ್ಣಗಳನ್ನು ಮತ್ತು ಬಟ್ಟೆಯ ಪರ್ಯಾಯ ವಿನ್ಯಾಸಗಳನ್ನು ಸೃಷ್ಟಿಸುವುದರ ಜೊತೆಗೆ ನಯವಾಗಿರುತ್ತದೆ.

What Is Seersucker Fabric? | Fabric Knowledge | Pine Crest Fabrics

5. ಮದ್ರಾಸ್ ಪ್ಲೈಡ್:‌ ಈ ವಿನ್ಯಾದ ಮೂಲ 12 ನೇ ಶತಮಾನ. ನೂಲಿನ ರೂಪದಲ್ಲಿದ್ದಾಗ ಬಟ್ಟೆಯನ್ನು ಕೈಯಿಂದ ಬಣ್ಣ ಮಾಡಲಾಗುತ್ತದೆ. ನಂತರ ನೂಲನ್ನು ಡೈ, ಉಪ್ಪು, ಸೋಡಾ, ನೀರು ಮತ್ತು ಸ್ಟೆಬಿಲೈಸರ್‌ಗಳನ್ನು ಹೊಂದಿರುವ ಹೋಲ್ಡರ್‌ಗೆ ಹಾಕಲಾಗುತ್ತದೆ. ನೇಯ್ಗೆ ಮಾಡುವ ಮೊದಲು ಬಾಚಣಿಗೆ ಮೂಲಕ ಎಳೆಯುತ್ತಾ ತಯಾರಿಸಲಾಗುಯತ್ತದೆ.

File:Patchwork madras fabric, made from Indian cotton madras plaid.jpg -  Wikimedia Commons

6. ಪೈಸ್ಲಿ: ಶಾಶ್ವತತೆಯನ್ನು ಸಂಕೇತಿಸುವ ಮರ, ಫಲವತ್ತತೆಯನ್ನು ಪ್ರತಿನಿಧಿಸುವ ಬೀಜ ಮತ್ತು ಚೈನೀಸ್ ಯಿನ್ ಯಾಂಗ್‌ಗೆ ಹತ್ತಿರವಿರುವ ಚಿಹ್ನೆಗಳು ಈ ಲಕ್ಷಣದ ಸೌಂದರ್ಯವನ್ನು ಆವರಿಸುತ್ತದೆ.

ಪೈನ್ ಕೋನ್ ವಿನ್ಯಾಸಗಳು ಪರ್ಷಿಯನ್ ಮೂಲದವು ಎಂದು ದಂತಕಥೆ ಹೇಳುತ್ತದೆ ಆದರೆ ಈ ಹೆಸರು ಪಶ್ಚಿಮ ಸ್ಕಾಟ್ಲೆಂಡ್‌ನ ಪೈಸ್ಲಿ ಪಟ್ಟಣದಿಂದ ಬಂದಿದೆ, ಅಲ್ಲಿ ಮುದ್ರಣಗಳನ್ನು ಉತ್ಪಾದಿಸಲಾಗುತ್ತದೆ.

Paisley Vector Art, Icons, and Graphics for Free Download

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!