ಅಮೃತಯಾತ್ರೆ: ಸ್ವಚ್ಛ ನಗರ ಸಾರಿಗೆಗಾಗಿ ಮೆಟ್ರೋ ಪರಿಚಯಿಸಿದ್ದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಸಮಯದಲ್ಲಿ ದೇಶದಲ್ಲಿ ನಗರ ಸಾರಿಗೆ ಮೆಟ್ರೋವನ್ನು ಪರಿಚಯಿಸಿದ್ದು ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲು. ಕೈಗಾರಿಕೆಗಳ ಬೆಳವಣಿಗೆ, ಉದ್ದಿಮೆಗಳ ಬೆಳವಣಿಗೆ ಹೀಗೆ ನಾನಾ ಕಾರಣಗಳಿಂದಾಗಿ ಭಾರತೀಯ ನಗರಗಳು ವಿಸ್ತರಿಸುತ್ತಿದ್ದು ಸುಗಮ ಹಾಗೂ ಸ್ವಚ್ಛ ನಗರ ಸಾರಿಗೆಯ ಉದ್ದೇಶದಿಂದ ಮೆಟ್ರೋ ರೈಲನ್ನು ಪರಿಚಯಿಸಲಾಯಿತು.

ಇದು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರೊಂದಿಗೆ ನಗರ ಪ್ರದೇಶಗಳಲ್ಲಿ ವೇಗದ ಸಾರಿಗೆ ವ್ಯವಸ್ಥೆಯನ್ನೂ ಉತ್ತೇಜಿಸುತ್ತದೆ. ಮೆಟ್ರೋ ರೈಲು ವ್ಯವಸ್ಥೆಯ ವಿಸ್ತರಣೆಗೆಂದೇ 2017ರಲ್ಲಿ ಮೆಟ್ರೋ ರೈಲು ನೀತಿಯನ್ನು ಪರಿಚಯಿಸಲಾಗಿದೆ. ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಮೆಟ್ರೋ ರೈಲುಗಳು ಕಾರ್ಯ ನಿರ್ವಹಿಸುತ್ತಿವೆ.

ಇತ್ತೀಚಿನ ಮಾಹಿತಿಯ ಪ್ರಕಾರ ಭಾರತದಲ್ಲಿ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಮೆಟ್ರೋ ರೈಲು ಜಾಲದ ಉದ್ದ 824 ಕಿಲೋಮೀಟರ್‌ಗಳಷ್ಟಿದ್ದು ಮತ್ತು ಇನ್ನೂ 1,039 ಕಿಲೋಮೀಟರ್‌ಗಳ ಕೆಲಸ ನಿರ್ಮಾಣ ಹಂತದಲ್ಲಿದೆ.

1984ರಲ್ಲಿ ಕೇವಲ ಒಂದೇ ನಗರದಲ್ಲಿದ್ದ ಮೆಟ್ರೋ ಸಾರಿಗೆಯು 2022ರ ಹೊತ್ತಿಗೆ 20 ನಗರಗಳಿಗೆ ವಿಸ್ತರಿಸಿದೆ, “ಮೇಕ್ ಇನ್ ಇಂಡಿಯಾ” ಉಪಕ್ರಮದ ಅಡಿಯಲ್ಲಿ ವಿದೇಶಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆಗೊಳಿಸಿ ಮೆಟ್ರೋ ಕೋಚ್‌ಗಳನ್ನು ದೇಶದಲ್ಲಿಯೇ ತಯಾರಿಸಲಾಗುತ್ತಿದೆ. ಆ ಮೂಲಕ ಸ್ವಚ್ಛ ನಗರ ಸಾರಿಗೆಗೆ ತನ್ನ ಬದ್ಧತೆಯನ್ನು ಭಾರತ ಎತ್ತಿ ಹಿಡಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!