ಅಮೃತಯಾತ್ರೆ: ಎಂಟುವರ್ಷದಲ್ಲಿ ನವೀಕರಿಸಬಹುದಾದ ಶಕ್ತಿಯುತ್ಪಾದನೆಯನ್ನು ದುಪ್ಪಟ್ಟಾಗಿಸಿದ ಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ಸಾಧಿಸಲ್ಪಟ್ಟ ಸಾಧನೆಗಳಲ್ಲಿ ಹಸಿರು ಇಂಧನ ಉತ್ಪಾದನೆಯ ಹೆಚ್ಚಳವೂ ಒಂದು. ನವೀಕರಿಸಬಹುದಾದ ಮೂಲಗಳ ಮೂಲಕ ಜೀವನಕ್ಕೆ ಅತಿ ಅವಶ್ಯಕವಾದ ಶಕ್ತಿಯುತ್ಪಾದನೆಯಲ್ಲಿ ಭಾರತ ಅತಿ ಹೆಚ್ಚಿನ ಪ್ರಗತಿ ಸಾಧಿಸಿದೆ. ಅದರಲ್ಲೂ 2012 ರಿಂದ 2020ರ ನಡುವಿನ ಅವಧಿಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ಶಕ್ತಿಯುತ್ಪಾದನೆಯ ಪ್ರಮಾಣವು ದುಪ್ಪಟ್ಟಾಗಿದೆ.

ಇಡೀಜಗತ್ತು ಇಂದು ಪಳೆಯುಳಿಕೆ ಇಂಧನಗಳ ಮೇಲೆ ನಿಂತಿದೆ. ಆದರೆ ಪಳೆಯುಳಿಕೆ ಇಂಧನಗಳಿ ಅಪರಿಮಿತ ಸಂಪನ್ಮೂಲಗಳಲ್ಲ. ಪಳೆಯುಳಿಕೆ ಇಂಧನ ಮೂಲಗಳು ಬರಿದಾಗುತ್ತ ಸಾಗುತ್ತಿದೆ. ಕೆಲ ವರದಿಗಳು ಹೇಳುವ ಪ್ರಕಾರ 2050ರ ವೇಳೆಗೆ ಕಚ್ಚಾತೈಲ ಮೂಲಗಳು ಬಹುತೇಕ ಖಾಲಿಯಾಗಬಹುದು ಎನ್ನಲಾಗಿದೆ. ಆದ್ದರಿಂದ ಪರಿಮಿತ ಸಂಪನ್ಮೂಲಗಳ ಬದಲಾಗಿ ಅಪರಿಮಿತ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸುವ, ಆ ಮೂಲಕ ಕಾರ್ಬನ್‌ ಹೆಜ್ಜೆಯನ್ನು ಕಡಿಮೆಗೊಳಿಸುವುದು ಅತೀ ಅವಶ್ಯವಾಗಿ ಮಾಡಲೇ ಬೇಕಾದ ಕೆಲಸಗಳಲ್ಲೊಂದು. ಈ ಹಿನ್ನೆಲೆಯಲ್ಲಿ ಭಾರತ ಈ ದಿಕ್ಕಿನಲ್ಲಿ ಕಾರ್ಯಗತವಾಗಿದ್ದು ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯುತ್ಪಾದನೆ ಸಾಧಿಸಿದೆ.

1990ರಲ್ಲಿ ಕೇವಲ 6 GWh ರಷ್ಟಿದ್ದ ನವೀಕರಿಸಬಹುದಾದ ಶಕ್ತಿ ಉತ್ಪಾದನೆಯು 2012ರ ವೇಳಗೆ 51,226 GWh ರಷ್ಟಾಗಿದೆ. ಇಲ್ಲಿಂದ 2020ರ ವೇಳೆಗೆ ಅಂದರೆ 8 ವರ್ಷಗಳ ಅವಧಿಯಲ್ಲಿ ಉತ್ಪಾದನೆ ದ್ವಿಗುಣಗೊಂಡಿದ್ದು 1,38,337 GWh ರಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವುದಾಗಿ ಭಾರತವು ಜಾಗತಿಕ ವೇದಿಕೆಗಳಲ್ಲಿಯೇ ಹೇಳಿದ್ದು ದೇಶದ ಇಂಧನ ಸಮಸ್ಯೆಗೆ ಈ ರೀತಿಯ ನವೀಕರಿಸಬಹುದಾದ ಶಕ್ತಿಯುತ್ಪಾನೆಯು ಗಣನೀಯ ಕೊಡುಗೆ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!