ಅಮೃತಯಾತ್ರೆ: ಜಗತ್ತಿಗೆ ಭಾರತ ಸಿಹಿಯುಣಿಸುತ್ತಿರೋದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಭಾರತವು ಇಂದು ಇಡI ಜಗತ್ತಿಗೇ ಸಿಹಿಯುಣಿಸುತ್ತಿರೋ ಸ್ವಾರಸ್ಯಕರ ಸಂಗತಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಇಂದು ಭಾರತವು ಜಗತ್ತಿನಲ್ಲಿಯೇ ಅತಿದೊಡ್ಡ ಸಕ್ಕರೆ ಉತ್ಪಾದಕನಾಗಿ ಹೊರಹೊಮ್ಮಿದೆ.

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 1960-61ರ ಸಮಯದಲ್ಲಿ ಭಾರತದಲ್ಲಿ ಸಕ್ಕರೆಯ ಉತ್ಪಾದನೆ 30.21 ಲಕ್ಷ ಟನ್‌ ಗಳಷ್ಟಿತ್ತು. ಇದು ಏರಿಕೆಯಾಗಿ 2010-11ರ ಸಮಯಕ್ಕೆ 243.50ಲಕ್ಷ ಟನ್‌ ಗೆ ತಲುಪಿತು. ಪ್ರಸ್ತುತ ಅಂದರೆ 2021-22ರಲ್ಲಿ 391.32 ಲಕ್ಷ ಕೋಟಿ ಟನ್‌ ಗಳಷ್ಟು ಸಕ್ಕರೆಯನ್ನು ಭಾರತದಲ್ಲಿ ಉತ್ಪಾದಿಸಲಾಗಿದೆ. ಉತ್ಪಾದನೆಯಲ್ಲಿ ಹೆಚ್ಚುಕಡಿಮೆ 11 ಪಟ್ಟು ಜಿಗಿತ ದಾಖಲಾಗಿದೆ. ಭಾರತದ ಸರ್ಕಾರವೂ ಕೂಡ ಕಬ್ಬು ಬೆಳೆಗಾರರಿಗೆ ಅಪಾರ ಉತ್ತೇಜನ ನೀಡುತ್ತಿದೆ. ಸಕ್ಕರೆ ಉದ್ದಿಮೆಯು ಇಂದು ಲಾಭದಾಯಕ ಉದ್ದಿಮೆಗಳಲ್ಲಿ ಒಂದಾಗಿದೆ.

ಉತ್ಪಾದನೆಯೊಂದೇ ಅಲ್ಲದೇ ಜಗತ್ತಿಗೆ ಸಕ್ಕರೆಯನ್ನು ಭಾರತವು ರಫ್ತು ಮಾಡುತ್ತಿದ್ದು ಜಗತ್ತಿನ ಎರಡನೇ ಅತಿದೊಡ್ಡ ಸಕ್ಕರೆ ರಫ್ತುದಾರನಾಗಿದೆ. ಅಲ್ಲದೇ ಕಬ್ಬು ಬೆಳೆಗಾರರನ್ನು ಉತ್ತೇಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಉದ್ದಿಮೆಗಳು ಇಂಧನ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದ್ದು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಉತ್ಪಾದನೆಗೂ ಕೊಡುಗೆ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!