Tuesday, October 3, 2023

Latest Posts

ಬ್ರಿಕ್ಸ್ ಶೃಂಗಸಭೆಗೆ ತೆರಳಿದ ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಆಫ್ರಿಕಾ ಮಹಿಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit 2023) ಭಾಗವಹಿಸಲು ದಕ್ಷಿಣ ಆಪ್ರಿಕಾದ ಜೋಹಾನ್ಸ್‌ಬರ್ಗ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ತೆರಳಿದ್ದು,ಈ ವೇಳೆ ಮೋದಿಯವರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಗಿದ್ದು, ಜೊತೆಗೆ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ಮೋದಿಗೆ ರಾಖಿ ಕಟ್ಟಿದ್ದಾರೆ.

ಜೋಹಾನ್ಸ್‌ಬರ್ಗ್ ಪ್ರಧಾನಿ ಮೋದಿ ಬರುತ್ತಿದ್ದಂತೆ ಭಾರತೀಯ ಸಮುದಾಯ ಜಯಘೋಷ ಮೊಳಗಿಸಿದ್ದಾರೆ. ಪುಟಾಣಿಯೊಬ್ಬ ಆರತಿ ಬೆಳಗಿ ಮೋದಿಗೆ ಸ್ವಾಗತ ನೀಡಿದ್ದಾನೆ. ಭಾರತೀಯ ಸಮುದಾಯದ ಉತ್ಸಾಹ, ಹಾಗೂ ಪ್ರೀತಿಗೆ ಮೋದಿ ಧನ್ಯವಾದ ಹೇಳಿದ್ದಾರೆ. ಎಲ್ಲರ ಕೈಕುಲುಕಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಲವರು ಪ್ರಧಾನಿ ಮೋದಿ ಪಾದಕ್ಕೆರಗಿ ನಮಸ್ಕರಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!