ಮಾವುತನನ್ನು ಬಟ್ಟೆ ಒಗೆದಂತೆ ಒಗೆದ ಆನೆ: ಕಾಲ್ಕಿತ್ತ ನವ ಜೋಡಿ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆನೆಗೆ ಕೋಪ ಬಂದರೆ ಅದನ್ನು ನಿಯಂತ್ರಿಸುವುದು ಅಸಾಧ್ಯ. ದಾರಿಯಲ್ಲಿ ಬಂದವರ ಹುಟ್ಟಡಗಿಸಿ ಮುಂದೆ ಸಾಗುತ್ತದೆ. ಇಂತಹದ್ದೇ ಘಟನೆಯೊಂದು ಕೇರಳ ರಾಜ್ಯದಲ್ಲಿ ನಡೆದಿದೆ. ಕೇರಳ ರಾಜ್ಯದ ಗುರುವಾಯೂರಿನಲ್ಲಿ ನವ ಜೋಡಿಯೊಂದು ಫೋಟೋ ಶೂಟ್ ಗೆ ರೆಡಿಯಾಗಿದೆ. ದೇವಸ್ಥಾನದಲ್ಲಿ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ್ದರು. ಆನೆ ಮೇಲೆ ವ್ಯಕ್ತಿ ಕುಳಿತಿದ್ದು, ಮಾವುತ ಆನೆಯನ್ನು ನಿಯಂತ್ರಿಸುತ್ತಿದ್ದಾನೆ. ಆರಾಮವಾಗಿದ ಆನೆ ಇದ್ದಕ್ಕದ್ದಂತೆ ಉಗ್ರ ರೂಪ ತೋರಿದೆ. ಮಾವುತನ ಮೇಲೆ ದಾಳಿ ಮಾಡಿ ಆತನ ಶರ್ಟ್‌ ಏಳೆದುಹಾಕಿದೆ. ಆನೆಯ ದಾಳಿಯಿಂದ ಮಾವುತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.

ಅಲ್ಲಿಯವರೆಗೂ ಅಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ನವಜೋಡಿಗಳು ಈ ಭೀಕರ ದೃಶ್ಯವನ್ನು ಗಮನಿಸಿ ಅಲ್ಲಿಂದ ಪರಾರಿಯಾದರು. ಈ ಆನೆ ದಾಳಿಯಿಂದ ಯಾರಿಗೂ ತೊದರೆಯಾಗದ ಕಾರಣ ಅಲ್ಲಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವರ ನೆನಪಿಸಿಕೊಂಡಿದ್ದಾನೆ ಅದನ್ನು ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!