Friday, February 3, 2023

Latest Posts

ದೇಶ ವಿಭಜನೆ ಬಳಿಕ ಸನಾತನ ಧರ್ಮದ ಅನುಯಾಯಿಗಳು ಮಾತ್ರ ಭಾರತದಲ್ಲಿ ಉಳಿಯಬೇಕಿತ್ತು: ಗಿರಿರಾಜ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶವು ‘ಧರ್ಮದ ಆಧಾರದ ಮೇಲೆ ವಿಭಜನೆ’ಯಾದ ಸಂದರ್ಭದಲ್ಲಿ ಸನಾತನ ಧರ್ಮದ ಅನುಯಾಯಿಗಳು ಮಾತ್ರ ಭಾರತದಲ್ಲಿ ಉಳಿದುಕೊಳ್ಳುವುದನ್ನು ಖಚಿತ ಪಡಿಸಿಕೊಳ್ಳಬೇಕಿತ್ತು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಜನಸಂಖ್ಯೆ ನಿಯಂತ್ರಣಕ್ಕಾಗಿ ಅಸ್ಸಾಂ ನಾಯಕ ಬದ್ರುದ್ದೀನ್ ಅಜ್ಮಲ್ ಹಿಂದೂ ಸಮುದಾಯದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗೆ ಬಿಜೆಪಿ ನಾಯಕ ಪ್ರತಿಕ್ರಿಯಿಸಿದ್ದಾರೆ. ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾಯಿತು. ಸನಾತನ ಧರ್ಮದಲ್ಲಿ ನಂಬಿಕೆ ಇರುವವರು ಮಾತ್ರ ಭಾರತದಲ್ಲಿ ಉಳಿಯ ಬೇಕು ಎಂದು ಮಾಡಿದ್ದರೆ, ನಾವು ಬದ್ರುದ್ದೀನ್ (ಎಐಎಂಐಎಂ ಮುಖ್ಯಸ್ಥ) ಮತ್ತು ಅಸಾದುದ್ದೀನ್ ಓವೈಸಿಯಂತಹ ಜನರ ನಿಂದನೆಗಳನ್ನು ಸಹಿಸಬೇಕಿರಲಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹೇಳಿದ್ದಾರೆ.
ದೇಶದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ. “ಚೀನಾದ ಜನಸಂಖ್ಯೆಯ ಕಾನೂನು ಆ ದೇಶದ ಮುಸ್ಲಿಮರನ್ನು ಒಳಗೊಂಡಂತೆ ಯಾರಿಗೂ ವಿನಾಯಿತಿ ನೀಡಲ್ಲ. ನಮ್ಮ ಭೂಪ್ರದೇಶವು ಪ್ರಪಂಚದಾದ್ಯಂತದ ಒಟ್ಟು ಭೂಪ್ರದೇಶದ ಕೇವಲ 2.5 ಪ್ರತಿಶತದಷ್ಟಿದ್ದರೂ ಸಹ ನಾವು ವಿಶ್ವದ ಜನಸಂಖ್ಯೆಯ 20 ಪ್ರತಿಶತದಷ್ಟು ಜನರಿಗೆ ನೆಲೆಯಾಗಿದ್ದೇವೆ. ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಹೊರತು ನಾವು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಿಲ್ಲ. ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳು ಜಾರಿಯಾಗಬೇಕಿದೆ ಎಂದು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!