ಮನುಷ್ಯನ ಮನೆಗಿಂತ ಮೃಗಾಲಯದಲ್ಲಿರುವ ಪ್ರಾಣಿಗಳ ಮನೆಯೇ ದುಬಾರಿ!

ಹೊಸದಿಗಂತ ವರದಿ,ಮೈಸೂರು:

ಅರಮನೆ ನಗರಿ ಮೈಸೂರಿನಲ್ಲಿ ಮನುಷ್ಯನ ವಾಸದ ಮನೆಕ್ಕಿಂತ ಇಲ್ಲಿರುವ ಚಾಮರಾಜೇಂದೆ ಮೃಗಾಲಯದಲ್ಲಿ ವಿದೇಶಿ ಪ್ರಾಣಿಗಳಿಗೆ ನಿರ್ಮಿಸುತ್ತಿರುವ ಮನೆಗಳಿಗೆ ಇದೀಗ ದುಬಾರಿಯಾಗುತ್ತಿದೆ.
2 ಬೆಡ್ ರೂಂನ ಮನೆಯೊಂದನ್ನು ಕೊಳ್ಳಲು 50 ರಿಂದ 75 ಲಕ್ಷ ರೂ ಬೇಕು. ಕೆಲವು ಸ್ಥಳಗಳಲ್ಲಿ 50 ಲಕ್ಷಕ್ಕೂ ಮನೆ ಸಿಗುತ್ತವೆ. ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ವಿದೇಶದಿಂದ ಬಂದಿರುವ ಪ್ರಾಣಿಗಳ ಮನೆ ನಿರ್ಮಾಣಕ್ಕೆ ಬರೋ ಬರೀ ಹತ್ತಿರ 1 ಕೋಟಿ ರೂ ಬೇಕು ಎಂದರೆ ನೀವು ನಂಬುತ್ತೀರಾ. ಹೌದು ಆಶ್ಚರ್ಯವಾದರೂ ಇದು ನಂಬಲೇ ಬೇಕಾದ ವಿಚಾರ .
ಇತ್ತೀಚಿಗೆ ಮೈಸೂರು ಮೃಗಾಲಯಕ್ಕೆ ಸಿಂಗಪುರ್ ಹಾಗೂ ಮಲೇಷಿಯಾದಿಂದ ಕ್ರಮವಾಗಿ ಮರ್ಲಿನ್-ಅಟಿನ ಮತ್ತು ಅಫಾ – ಮಿನ್ನಿ ಎಂಬ ಎರಡು ಜೊತೆ ಒರಾಂಗೂಟಾನ್‌ಗಳನ್ನು ತರಿಸಲಾಗಿತ್ತು. ಇವುಗಳನ್ನು ಬಿಎನ್ ಪಿಎಂಐ ನೀಡಿದ 70 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ್ದ ಮನೆಯಲ್ಲಿ ಇರಿಸಲಾಗಿದೆ.
ಮತ್ತೊಂದು ನವೀನ ಮಾದರಿಯ ಒರಾಂಗೂಟಾನ್ ಪ್ರಾಣಿ ಮನೆಯ ನಿರ್ಮಾಣ ಕಾಮಗಾರಿಗೆ ಇದೀಗ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಬಿಎನ್ ಪಿಎಂಐ ಬರೋ ಬರೀ 99.20 ಲಕ್ಷ ಅನುದಾನ ನೀಡಿದೆ.
ಈ ಒರಾಂಗೂಟಾನ್ ತಳಿಯ ಸಂತಾನಾಭಿವೃದ್ಧಿ ಮಾಡಲು ಈಗಾಗಲೇ ಇರುವ ಒರಾಂಗೂಟಾನ್ ಮನೆಯು ಸಾಲದೆ ಇರುವುದರಿಂದ, ಅವುಗಳ ಕುಟುಂಬಕ್ಕೆ ಮತ್ತೊಂದು ಮನೆಯ ಅವಶ್ಯಕತೆ ಇದೆ. ಹಾಗಾಗಿ ಈ ನವೀನ ಮಾದರಿಯ ಒರಾಂಗೂಟಾನ್ ಮನೆಗೆ ಸುಮಾರು 99.20 ಲಕ್ಷ ವೆಚ್ಚವಾಗಬಹುದು ಎಂಬುದನ್ನು ಮೃಗಾಲಯದವರು ಅಂದಾಜಿಸಿದ್ದಾರೆ. ಈ ಮೊತ್ತವನ್ನ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೆ. ಲಿ ನವರು ತಮ್ಮ ಸಿಎಸ್‌ಆರ್ ಅನುದಾನದಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ಅನುದಾನದಿಂದ ಮೃಗಾಲಯದಲ್ಲಿ ನವೀನ ಮಾದರಿಯ ಒರಾಂಗೂಟಾನ್ ಪ್ರಾಣಿ ಮನೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!