Wednesday, October 5, 2022

Latest Posts

ಶ್ರೀಗಂಧದ ಮರಕ್ಕೆ ಕೊಡಲಿ: ಓರ್ವನ ಬಂಧನ

ಹೊಸದಿಗಂತ ವರದಿ, ಸೋಮವಾರಪೇಟೆ:
ಶ್ರೀಗಂಧದ ಮರವನ್ನು ಬುಡದಿಂದ ಕಡಿದು ತುಂಡುಗಳಾಗಿ ಪರಿವರ್ತಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಸಿಬ್ಬಂದಿಗಳು ಓರ್ವನನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಶೋಧ ನಡೆಸುತ್ತಿದ್ದಾರೆ.
ಬಂಧಿತನನ್ನು ಎಡವಾರೆ ಗ್ರಾಮದ ಜೆ.ಕೆ.ರವಿ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಆರೋಪಿ ನೇಗಳ್ಳಿ ಗ್ರಾಮದ ಮದನ್ ಎಂಬಾತ ತಲೆಮರೆಸಿಕೊಂಡಿರುವುದಾಗಿ ಹೇಳಲಾಗಿದೆ.
ಆರೋಪಿಗಳು ಶನಿವಾರ ರಾತ್ರಿ ಸೋಮವಾರಪೇಟೆ ಅರಣ್ಯ ವಲಯದ ಮಾದಪುರ ಶಾಖೆ ವ್ಯಾಪ್ತಿಯ ಐಗೂರು ಎಡವಾರೆ ಗ್ರಾಮದ ಗೋಟವಾಳ ಮಂಟಿ ಜಾಗದಲ್ಲಿ ಅನಧಿಕೃತವಾಗಿ ಒಂದು ಶ್ರೀಗಂಧ ಮರವನ್ನು ಬುಡದಿಂದ ಕಡಿದು ತುಂಡುಗಳಾಗಿ (ಅಂದಾಜು 30 ಕೆಜಿ ಎಷ್ಟು) ಪರಿವರ್ತಿಸುತ್ತಿದ್ದರೆಂದು ಹೇಳಲಾಗಿದೆ.
ವಲಯದ ಅರಣ್ಯ ಅಧಿಕಾರಿ ಹೆಚ್.ಪಿ. ಚೇತನ್ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಜಗದೀಶ್, ಅರಣ್ಯ ರಕ್ಷಕರಾದ ಭರಮಪ್ಪ, ಚೇತನ್, ವೀರಪ್ಪ, ಸಿಬ್ಬಂದಿಗಳಾದ ನಂದೀಶ್, ವಿನು, ಹರ್ಷಿತ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!