Wednesday, October 5, 2022

Latest Posts

ಭೀಕರ ರಸ್ತೆ ಅಪಘಾತ: ಶಿವಸಂಗ್ರಾಮ್ ನಾಯಕ ವಿನಾಯಕ್‌ ಮೇಟೆ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಮುಂಜಾನೆ ರಾಯಗಢದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಹಾರಾಷ್ಟ್ರದ ಶಿವಸಂಗ್ರಾಮ್ ನಾಯಕ ಹಾಗೂ ಮಾಜಿ ರಾಜ್ಯ ಸಚಿವ ವಿನಾಯಕ್ ಮೇಟೆ ನಿಧನರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪನ್ವೇಲ್‌ನ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮರಾಠಾ ಮೀಸಲಾತಿ ಕುರಿತಂತೆ ಚರ್ಚೆಗಾಗಿ ಮುಂಬೈಗೆ ತೆರಳುತ್ತಿದ ವೇಳೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇನ ಮಡಪ್‌ ಸುರಂಗದ ಬಳಿ ಇಂದು ಬೆಳಗಿನ ಜಾವ ಮೇಟೆ ಅವರ ಕಾರು ಅಪಘಾತಕ್ಕೀಡಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಸೇರಿದಂತೆ ಕಾರಿನಲ್ಲಿದ್ದ ಸಿಬ್ಬಂದಿಗಳಿಗೂ ಗಂಭೀರ ಗಾಯಗಳಾಗಿವೆ.

ಅಪಘಾತದಲ್ಲಿ ವಿನಾಐಕ್‌ ಮೇಟೆ ಅವರ ಲುತ್ತಿಗೆ, ಕೈಕಾಲು, ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ಮಹಾತ್ಮ ಗಾಂಧಿ ಮಿಷನ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ವಿನಾಯಕ್‌ ಮೇಟೆ ನಿಧನದಿಂದ ಅವರ ಕುಟುಂಬದಲ್ಲಿ ಶೋಕ ಮನೆ ಮಾಡಿದೆ. ಅನೇಕ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!