ಮಳೆಗೆ ಮನೆ ಗೋಡೆ ಕುಸಿದು ವೃದ್ಧೆ ಸಾವು

ಹೊಸದಿಗಂತ ವರದಿ ಗದಗ: 

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಗದಗ ಜಿಲ್ಲೆಯ ರೋಣ ತಾಲೂಕು ತತ್ತರಿಸಿ ಹೊಗಿದ್ದು. ಇದಕ್ಕೆ ಸಾಕ್ಷಿಯನ್ನುವಂತೆ ಮೊದಲ ಬಲಿಯಾಗಿದೆ. ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಇಂದು ನಸುಕಿನ ಜಾವಾ 80 ವಷ೯ದ ವೃದ್ದೆ ಮನೆ ಗೊಡೆ ಕುಸಿದ ಪರಿಣಾಮ ಸಾವನ್ನಪ್ಪಿದ್ದಾರೆ.

ಮೃತ ವೃದ್ದೆಯನ್ನು ಲಕ್ಷ್ಮವ್ವ ಮಾದರ ಎಂದು ಗುರುತಿಸಲಾಗಿದ್ದು.ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಕ್ಕೆ ಅಗ್ನಿಶಾಮಕ ಸಿಬ್ಬಂದಿ,ಪೊಲೀಸರು ದೌಡಾಯಿಸಿ ಮಣ್ಣಿನಯಡಿಯಲ್ಲಿ ಸಿಲುಕಿದ್ದ ವೃದ್ದೆಯ ಮೃತ ದೇಹವನ್ನು ಹೊರತೆಗೆದರು, ವಿಷಯ ತಿಳಿದ ತಹಶೀಲ್ದಾರ ವಾಣಿ ಉಂಕಿಯವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!