Wednesday, September 28, 2022

Latest Posts

ಕಾಫಿ ವಿತ್ ಕರಣ್‌ನಲ್ಲಿ ಗೌರಿ ಖಾನ್, ಸಾಥ್ ಕೊಡಲಿದ್ದಾರಾ ಶಾರುಖ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಫಿ ವಿತ್ ಕರಣ್ ಶೋನಲ್ಲಿ ಈಗಾಗಲೇ ಸಮಂತಾ, ಅಕ್ಷಯ್, ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಕಿಯಾರಾ ಅಡ್ವಾನಿ ಇನ್ನೂ ಹಲವರು ಕಾಣಿಸಿಕೊಂಡಿದ್ದಾರೆ.
ಈ ಸಾಲಿಗೆ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೂಡ ಸೇರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗೌರಿ ಹೇಳಿಕೊಂಡಿದ್ದು, ಡ್ರೀಮ್ ಹೋಮ್ಸ್ ವಿತ್ ಗೌರಿ ಖಾನ್ ಶೋ ಪ್ರಮೋಟ್ ಮಾಡಲು ಕಾಫಿ ವಿತ್ ಕರಣ್ ಶೋಗೆ ಬರಲಿದ್ದೇನೆ, ನನ್ನ ಜೊತೆ ಶಾರುಖ್ ಖಾನ್ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಗೌರಿ ಖಾನ್ ಬರುತ್ತಿದ್ದಾರೆ ಎಂದಾಕ್ಷಣ, ಶಾರುಖ್ ಜೊತೆಯಲ್ಲಿ ಇರುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಶೂಟಿಂಗ್ ಕಾರಣದಿಂದ ಶಾರುಖ್ ಕೂಡ ಬ್ಯುಸಿಯಾಗಿದ್ದು ಗೌರಿ ಖಾನ್ ಶೋನಲ್ಲಿ ಕಾಣಿಸಲಿದ್ದಾರೆ.
ಗೌರಿ ಖಾನ್ ಜೊತೆಗೆ ಭಾವನಾ ಪಾಂಡೆ,ಸೀಮಾ ಸಚ್‌ದೇವ್, ಮಹ್‌ದೀಪ್ ಕಪೂರ್ ಹಾಗೂ ನೀಲಮ್ ಕೊಠಾರಿ ಸೋನಿ ಇರಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!