ಕುಡಿತಕ್ಕಾಗಿ ಆಫೀಸಿನ ವಸ್ತುಗಳು, ಕಿಟಿಕಿ, ಬಾಗಿಲನ್ನೂ ಬಿಡದೆ ಕದ್ದು ಮಾರಿದ ಉದ್ಯೋಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮದ್ಯ ವ್ಯಸನಿಗಳು ಯಾವುದೇ ಹಂತಕ್ಕೆ ಇಳಿಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಒಡಿಶಾದಲ್ಲಿ ನಡೆದ ಒಂದು ವಿಲಕ್ಷಣ ಘಟನೆಯಲ್ಲಿ ಉದ್ಯೋಗಿಯೊಬ್ಬ ತನ್ನ ದೈನಂದಿನ ಕುಡಿತದ ಚಟಕ್ಕಾಗಿ ತಾನು ಕಾರ್ಯನಿರ್ವಹಿಸುತ್ತಿದ್ದ ಆಫೀಸ್‌ ನ ಆಸ್ತಿ, ಪೀಠೋಪಕರಣಗಳು ಮತ್ತು ಫೈಲ್‌ಗಳನ್ನು ಸಹ ಮಾರಾಟ ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ಗಂಜಾಂ ಜಿಲ್ಲಾ ಶಿಕ್ಷಣ ಕಛೇರಿಯಲ್ಲಿ (DEO) ಪ್ಯೂನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪೀತಾಂಬರ ಎಂಬ ಉದ್ಯೋಗಿ ಕಳೆದ ಎರಡು ವರ್ಷಗಳಿಂದ ತನ್ನ ಆಫೀಸ್‌ ನಲ್ಲಿನ ಒಂದೊಂದೇ ವಸ್ತುಗಳನ್ನು ಗುಜರಿಯವರಿಗೆ  ಮಾರಾಟ ಮಾಡಿಕೊಂಡು ಬರುತ್ತಿದ್ದ. ಅಚ್ಚರಿಯೆಂದರೆ ಆತನ ಕೃತ್ಯಗಳು ಯಾರ ಗಮನಕ್ಕೂ ಬಂದಿರಲಿಲ್ಲ. ಆತ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿ ಹಳೆಯ ಕಚೇರಿಯಾಗಿದ್ದು ಆ ಬಳಿಕ ಕಚೇರಿ ಸ್ಥಳಾಂತರಗೊಂಡಿದ್ದರಿಂದ ಕಟ್ಟಡದತ್ತ ಅಧಿಕಾರಿಗಳು ಗಮನಹರಿಸಿಲ್ಲ.
ಹಳೆಯ ಕಟ್ಟಡಗಳಲ್ಲಿ ಬಹುಮುಖ್ಯ ಫೈಲ್‌ ಗಳು ಮತ್ತು ಪೀಠೋಪಕರಣಗಳನ್ನು ಹೊಂದಿದ್ದರೂ, ಕಳೆದ ಎರಡು ವರ್ಷಗಳಿಂದ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಯಾರೂ ಕಟ್ಟಡಕ್ಕೆ ಭೇಟಿ ನೀಡಿರಲಿಲ್ಲ.
ಇತ್ತೀಚೆಗೆ ಕೆಲವು ಹಳೆಯ ಕಡತಗಳನ್ನು ಪರಿಶೀಲಿಸಲು ಕಚೇರಿಗೆ ಹೋದ ಅಧಿಕಾರಿಯೊಬ್ಬರು ದಿಗ್ಬ್ರಾಂತರಾಗಿದ್ದಾರೆ. ಅಸಲಿಗೆ ಫ್ಯೂನ್‌ ಅಲ್ಲಿನ 4 ಗೋಡೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಸ್ತುಗಳನ್ನು ತನ್ನ ಕುಡಿತದ ಚಟಕ್ಕಾಗಿ ದೋಚಿದ್ದ.
ಮುಚ್ಚಿದ ಕಚೇರಿ ಕಟ್ಟಡಕ್ಕೆ ಯಾರೂ ಭೇಟಿ ನೀಡದ ಕಾರಣ ಕಳೆದ ಎರಡು ವರ್ಷಗಳಿಂದ ಮದ್ಯದ ಅಂಗಡಿಗೆ  ಎರಡು ಬಾಗಿಲುಗಳು, ಕಿಟಕಿಗಳು 35 ಅಲ್ಮೇರಾಗಳು, 10 ಸೆಟ್ ಕುರ್ಚಿಗಳು ಮತ್ತು ಟೇಬಲ್‌ಗಳು ಸೇರಿದಂತೆ ಪ್ರಮುಖ ಫೈಲ್‌ಗಳು, ಪೀಠೋಪಕರಣಗಳನ್ನು ಆತ ಮಾರಾಟ ಮಾಡಿರುವುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಈ ಬಗ್ಗೆ ಅಧಿಕಾರಿಗಳು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!