Sunday, December 4, 2022

Latest Posts

ಪಿಎಫ್ಐನ ಹಿರೇಕೆರೂರ ತಾಲೂಕು ಅಧ್ಯಕ್ಷ ರಬ್ಬಾನಿ ಲೋಹಾರ ಬಂಧನ

ಹೊಸದಿಗಂತ ವರದಿ ಹಾವೇರಿ :

ಹಾವೇರಿ ಜಿಲ್ಲೆಯಲ್ಲಿಯೂ ಇಂದು ದಾಳಿ ನಡೆದಿದ್ದು, ಪಿಎಫ್ಐನ ಹಿರೇಕೆರೂರ ತಾಲೂಕು ಅಧ್ಯಕ್ಷ ರಬ್ಬಾನಿ ಲೋಹಾರ ಎಂಬಾತನನ್ನು ಬಂಧಿಸಲಾಗಿದೆ.
ಮಂಗಳವಾರ ಮುಂಜಾನೆ‌ ದಿಢೀರ್ ದಾಳಿ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ತಹಶೀಲ್ದಾರ್ ಮುಂದೆ ಹಾಜರು ಪಡಿಸಿದ್ದರು.
ಪೊಸ್ಟರ್ ಹಚ್ಚಿದ ಪ್ರಕರಣ, ಹಿಜಾಬ್ ಘಟನೆ ನಡೆದ ಸಂದರ್ಭದಲ್ಲಿ ಹಿಜಾಬ್ ವಿರೋಧಿ ಬಣದ ಓರ್ವನ ಮೇಲೆ ಹಲ್ಲೆ ಮಾಡಿದ ಪ್ರಕರಣ ಈತನ ಮೇಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!