ಒಂದಲ್ಲಾ ಎರಡಲ್ಲಾ, ಐದೈದು ಮದುವೆಯಾಗಿಯೂ ಬ್ಯಾಚುಲರ್‌ ಅಂತಿದ್ದ ಇಂಜಿನಿಯರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಐದೈದು ಮದುವೆಯಾಗಿ ನಾನಿನ್ನು ಬ್ರಹ್ಮಚಾರಿ ಎಂದು ಹೇಳುತ್ತಾ ಓಡಾಡುತ್ತಿದ್ದ ಸಾಫ್ಟ್​ವೇರ್ ಇಂಜಿನಿಯರ್ ವಿರುದ್ಧ ದೂರು ದಾಖಲಾಗಿದೆ.

ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ, ರುಸ್ತುಂ ಸಿಂಗ್ ಶೇಖರ್ ಎಂಜಿನಿಯರ್​ ಆಗಿದ್ದು 2018ರ ಮಾರ್ಚ್​ 13ರಂದು ಮೊದಲ ಮದುವೆಯಾಗಿದ್ದ. ಮದುವೆಯಾದ ಬಳಿಕ ಕೆಲಸದ ನಿಮಿತ್ತ ಹೊರಗಡೆ ಹೋದವನು ಬೇರೆ ಬೇರೆ ಕಡೆ ಬೇರೆ ಮಹಿಳೆಯರನ್ನು ಮದುವೆಯಾಗಿದ್ದ.

ಆತನ ಮೊದಲ ಪತ್ನಿ ಗ್ವಾಲಿಯರ್ ಎಸ್ಪಿಗೆ ಬಂದು ದೂರು ನೀಡಿದ್ದಾಳೆ. ಆಕೆ ಈಗಾಗಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು, ಆದರೆ ಇದುವರೆಗೆ ಯಾವುದೇ ಬಂಧನವಾಗಿಲ್ಲ.

ಆತ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾನೆ ಎಂದು ಅನುಮಾನ ವ್ಯಕ್ತ ಪಡಿಸಿರುವ ಪತ್ನಿ ಆಕೆ ಈಗ ಆತನ ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!