ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು, ಡಿಸೆಂಬರ್ 5ರಂದು ‘ಪುಷ್ಪ 2’ ಬಿಡುಗಡೆ ಆಗಲಿದೆ .
ಇತ್ತೀಚೆಗಷ್ಟೇ ಶೂಟಿಂಗ್ ಮುಕ್ತಾಯ ಆಗಿದ್ದು, ಈ ಕುರಿತು ವಿಷಯವನ್ನು ಹಂಚಿಕೊಳ್ಳುವಾಗ ರಶ್ಮಿಕಾ ಮಂದಣ್ಣ ಅವರು ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಹೇಳಿದ್ದಾರೆ. ‘ಪುಷ್ಪ 3’ ಸಿನಿಮಾ ಕೂಡ ಬರಬಹುದು ಎಂಬ ಸುಳಿವನ್ನು ಅವರು ನೀಡಿದ್ದಾರೆ.
5 ವರ್ಷಗಳ ಪುಷ್ಪ ಚಿತ್ರದ ಜರ್ನಿ ಕೊನೆ ಆಗಿದೆ. ಎಂಥ ಅದ್ಭುತ ಜರ್ನಿ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನ.25ರಂದು ಪುಷ್ಪ 2 ಚಿತ್ರ ಸಂಪೂರ್ಣ ಆಗಿದೆ ಎನ್ನುವ ಮಾತಿನಿಂದ ಅವರು ತಮ್ಮ ಪತ್ರವನ್ನುಶುರು ಮಾಡಿದ್ದಾರೆ. ನನ್ನ ಸಿನಿ ಜೀವನದ ಏಳೆಂಟು ವರ್ಷಗಳಲ್ಲಿ ಕಳೆದ 5 ವರ್ಷ ‘ಪುಷ್ಪ 2’ ಸೆಟ್ಟೇ ನನ್ನ ಮನೆಯಾಗಿತ್ತು. ಅಂತೂ ಇದು ನನ್ನ ಕೊನೆಯ ದಿನ. ಪಾರ್ಟ್ 3 ಸಂಬಂಧಿಸಿ ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ. ಅದು ಕೂಡ ವಿಶೇಷವಾಗಿದೆ ಎನ್ನುವ ಮೂಲಕ ಅದು ಕೂಡ ಬರುವ ಬಗ್ಗೆ ತಿಳಿಸಿದ್ದಾರೆ.
ಇದೇ ವೇಳೆ ಚಿತ್ರೀಕರಣ ಮುಗಿರುವುದಕ್ಕೆ, ಭಾವುಕರಾಗಿರುವ ನಟಿ, ಎನು ಎಂದು ಅರ್ಥವಾಗದ ನೋವು ನನ್ನನ್ನು ಕಾಡುತ್ತಿದೆ. ಎಲ್ಲಾ ಭಾವನೆಗಳು ಈಗ ಒಟ್ಟಾಗಿವೆ. ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ದಿನಗಳು ನೆನಪಾಗುತ್ತಿವೆ. ಆ ದಿನಗಳಲ್ಲಿ ನಾನು ತುಂಬಾ ದಣಿದಿದ್ದೆ. ಈಗ ಎಲ್ಲಾ ನೆನಪಿಸಿಕೊಂಡರೆ ಎಲ್ಲಾ ಅದ್ಭುತ ಎನಿಸುತ್ತಿದೆ ಎಂದು ಹೇಳಿರುವ ನಟಿ, ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ ಮತ್ತು ಇಡೀ ತಂಡಕ್ಕೆ ಕೃತಜ್ಞರಾಗಿರುವುದಾಗಿ ತಿಳಿಸಿದ್ದಾರೆ.
‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ‘ಪುಷ್ಪ 2’ ಸಿನಿಮಾದ ಮೇಲೆ ನಿರೀಕ್ಷೆ ಜಾಸ್ತಿ ಆಯಿತು. ಹಾಗಾಗಿ ದೊಡ್ಡ ಬಜೆಟ್ನಲ್ಲಿ ಸೀಕ್ವೆಲ್ ನಿರ್ಮಾಣ ಮಾಡಲಾಯಿತು. ಈ ಕಥೆಯನ್ನು ಇನ್ನಷ್ಟು ಮುಂದುವರಿಸಬಹುದು ಎಂದಾದರೆ ಖಂಡಿತವಾಗಿ ಪಾರ್ಟ್ 3 ಬರುತ್ತದೆ. ಈಗ ನಿರ್ದೇಶಕ ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾದ ಕಥೆಯನ್ನು ಹೇಗೆ ಕೊನೆಯಾಗಿಸಿದ್ದಾರೆ ಎಂಬುದು ತಿಳಿದರೆ ಮುಂದಿನ ದಾರಿ ಸ್ಪಷ್ಟವಾಗುತ್ತದೆ. ಅದನ್ನು ತಿಳಿಯಲು ಡಿಸೆಂಬರ್ 5ಕ್ಕಾಗಿ ಕಾಯಬೇಕು.