ಸ್ನಾನಕ್ಕೆಂದು ನದಿಗಿಳಿದ ಯುವಕರು ನೀರಲ್ಲಿ ಮುಳುಗಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ನಾನ‌ಮಾಡಲು ನದಿಗಿಳಿದ ಮೂವರು ಯುವಕರು ಮುಳುಗಿ ಮೃತಪಟ್ಟ ದಾರುಣ ವಿದ್ಯಮಾನ ಬೆಳ್ತಂಗಡಿ ತಾಲೂಕಿನ ವೇಣೂರು ಸನಿಹ ಬುಧವಾರ ಸಂಜೆ ನಡೆದಿದೆ.

ಕುಪ್ಪೆಪದವು ನಿವಾಸಿ ಲಾರೆನ್ಸ್(20), ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19), ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ಎಂಬವರೇ ಮೃತಪಟ್ಟವರಾಗಿದ್ದಾರೆ.
ಇವರು ವೇಣೂರಿನ ಚರ್ಚೊಂದರ ವಾರ್ಷಿಕ ಹಬ್ಬಕ್ಕೆಂದು ಮೂಡುಕೋಡಿ ಗ್ರಾಮದ ವಾಲ್ಟ‌ರ್ ಎಂಬವರ ಮನೆಗೆ ಬಂದಿದ್ದರು.

ಬಳಿಕ ಅವರು ಮಧ್ಯಾಹ್ನದ ಊಟ ಮುಗಿಸಿ ನಡ್ತಿಕಲ್ಲು ಬರ್ಕಜೆ ಎಂಬಲ್ಲಿನ ಕಿಂಡಿಅಣೆಕಟ್ಟೆಯ ಸನಿಹದ ನೀರಿನಿಂದ ತುಂಬಿಕೊಂಡಿದ್ದ ಗಗ್ಗರ ಎರುಗುಂಡಿ ಎಂಬಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾಗದೆ ಮುಳುಗಿ ಮೂವರೂ ಯುವಕರು ಮೃತಪಟ್ಟಿದ್ದಾರೆ .

ಮೂವರ ಮೃತದೇಹಗಳನ್ನು ಪೋಲಿಸರ, ಅಗ್ನಿಶಾಮಕ ದಳದವರ ಹಾಗೂ ಸ್ಥಳೀಯರ ಸಹಕಾರದಿಂದ ನೀರಿನಿಂದ ಹೊರತೆಗೆಯಲಾಗಿದೆ. ಯುವಕರು ಮಂಗಳೂರಿನ ಮಂಗಳಾ ಕಾಲೇಜಿನ ನರ್ಸಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!