ಅಮೆರಿಕದಲ್ಲಿ ಎನ್‌ಕೌಂಟರ್‌ಗೆ ಭಾರತ ಮೂಲದ ವ್ಯಕ್ತಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಭಾರತೀಯ ಮೂಲದ (Indian Origin) ವ್ಯಕ್ತಿಯನ್ನು ಸ್ಯಾನ್ ಆಂಟೋನಿಯೊದಲ್ಲಿ ಪೊಲೀಸರು (US Police) ಗುಂಡಿಕ್ಕಿ ಕೊಂದಿದ್ದಾರೆ.

ವಾಷಿಂಗ್ಟನ್‌: 42 ವಯಸ್ಸಿನ ಭಾರತೀಯ ಮೂಲದ (Indian Origin) ವ್ಯಕ್ತಿಯನ್ನು ಸ್ಯಾನ್ ಆಂಟೋನಿಯೊದಲ್ಲಿ ಪೊಲೀಸರು (US Police) ಗುಂಡಿಕ್ಕಿ ಕೊಂದಿದ್ದಾರೆ.

ಏಪ್ರಿಲ್ 21 ರಂದು ಪೊಲೀಸ್ ಅಧಿಕಾರಿ ಟೈಲರ್ ಟರ್ನರ್ ಹಾರಿಸಿದ ಗುಂಡು ತಗುಲಿ ಸಚಿನ್ ಸಾಹೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಾಹೂ ಮೂಲತಃ ಉತ್ತರ ಪ್ರದೇಶದವರು. ಅಮೆರಿಕದ ಪೌರತ್ವ (US citizenship) ಪಡೆದು ಅಲ್ಲೇ ವಾಸವಾಗಿದ್ದ ಎನ್ನಲಾಗಿದೆ.

ಪೊಲೀಸ್‌ ಪ್ರಾಥಮಿಕ ತನಿಖೆ ವರದಿ ಪ್ರಕಾರ, ಏ.21, ಸಂಜೆ 6.30ರ ವೇಳೆ ಸ್ಯಾನ್‌ ಆಂಟೋನಿಯೋದಲ್ಲಿ ಯಾವುದೋ ಒಂದು ಮನೆಯಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣದ ತನಿಖೆಗೆಂದು ಪೊಲೀಸರು ತೆರಳಿದ್ದಾಗ ವಾಹನ ಡಿಕ್ಕಿಯಾಗಿ 51 ಮಹಿಳೆ ಗಂಭೀರವಾಗಿ ಗಾಯಗೊಂಡಿರುವುದು ಕಂಡು ಬಂದಿತ್ತು. ಈ ಅಪಘಾತವನ್ನು ಸಾಹೂ ಉದ್ದೇಶಪೂರ್ವಕವಾಗಿ ಮಾಡಿದ್ದ ಹಾಗೂ ಪೊಲೀಸರನ್ನು ಕಂಡ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಸಾಹೂ ಹುಡುಕಾಟಕ್ಕೆ ಮುಂದಾದರು.

ಈ ಪ್ರಕರಣದಲ್ಲಿ ಸ್ಯಾನ್‌ ಆಂಟೋನಿಯೋ ಪೊಲೀಸರು ಸಾಹೂ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿಗೊಳಿಸಿದ್ದರು. ಸುಮಾರು ಗಂಟೆಗಳ ಬಳಿಕ ಸಾಹೂ ತನ್ನ ಮನೆಗೆ ಮರಳಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್‌ ಅಧಿಕಾರಿಗಳು ಸಾಹೂವನ್ನು ಹಿಡಿಯಲು ಬರುತ್ತಿದ್ದಂತೆ ಆತ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಆಗ ಕಾರನ್ನು ತಡೆಯಲು ಯತ್ನಿಸಿದ ಪೊಲೀಸರಿಗೆ ಡಿಕ್ಕಿ ಹೊಡೆದಿದ್ದಾನೆ. ತಮ್ಮ ಪ್ರಾಣ ರಕ್ಷಣೆಗೆ ಮುಂದಾದ ಪೊಲೀಸರು ಸಾಹೂ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ತಗುಲುತ್ತಿದ್ದಂತೆ ಸಾಹೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮತ್ತೊಂದೆಡೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್‌ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಹಿರಿಯ ಅಧಿಕಾರಿ ಬಿಲ್‌ ಮ್ಯಾಕ್‌ ಮ್ಯಾನಸ್‌ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!