ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ನಡೆದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಪಂಜಾಬ್‌ನಲ್ಲಿ ಬಂಧಿಸಲಾಗಿದ್ದ ಇನ್ನಿಬ್ಬರು ಆರೋಪಿಗಳನ್ನು ಶುಕ್ರವಾರ ಮುಂಬೈ ಕೋರ್ಟ್ ಇದೇ 30ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಈಗಾಗಲೇ ಬಂಧಿಸಲಾಗಿರುವ ಇಬ್ಬರು ಶೂಟರ್‌ಗಳಾದ ಸಾಗರ್ ಪಾಲ್ (21) ಮತ್ತು ವಿಕ್ಕಿ ಗುಪ್ತಾಗೆ (24) ಪಿಸ್ತೂಲ್‌ಗಳು ಮತ್ತು ಗುಂಡುಗಳನ್ನು ಪೂರೈಸಿರುವ ಆರೋಪದ ಮೇರೆಗೆ ಈ ಆರೋಪಿಗಳನ್ನು ಅಪರಾಧ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದರು.ಆರೋಪಿಗಳಾದ ಸುಭಾಷ್ ಚಂದರ್ (37) ಮತ್ತು ಅನೂಜ್ ತಪನ್ (32) ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಶಸ್ತ್ರಾಸ್ತ್ರಗಳನ್ನು ಪೂರೈಸಿದವರ ಪತ್ತೆಗಾಗಿ ಇವರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಾಲಯವು ಗುರುವಾರ, ಪಾಲ್ ಮತ್ತು ಗುಪ್ತಾ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.