ಮೇಘನಾ ಶೆಟ್ಟಿ ಶಿವಮೊಗ್ಗ
ಹೆಣ್ಣುಮಕ್ಕಳು ಬಾಯಿಬಿಟ್ಟು ಮಾತನಾಡಿದಷ್ಟು ಗಂಡಸರು ಮಾತನಾಡೋದಿಲ್ಲ. ಹೆಂಡತಿಯ ಮೇಲೆ ಸಾವಿರ ನಿರೀಕ್ಷೆ ಇರುತ್ತದೆ, ಆದರೆ ಹೇಳೋದಿಲ್ಲ. ಕೆಲವು ಸಂಬಂಧಗಳಲ್ಲಿ ಹೇಳಿದರೆ ಅರ್ಥವಾಗೋದಿಲ್ಲ, ಉಪಯೋಗ ಇಲ್ಲ ಎಂದುಕೊಳ್ಳಬಹುದು. ಇನ್ನು ಹಲವರು ಹೆಂಡತಿಯನ್ನು ಬದಲಾಯಿಸೋಕೆ ಇಷ್ಟಪಡದೇ ಇರಬಹುದು. ಮಾತನಾಡದಿದ್ರೂ ಹೆಂಡತಿ ಬಗ್ಗೆ ಇಷ್ಟೆಲ್ಲಾ ಎಕ್ಸ್‌ಪೆಕ್ಟೇಷನ್ ಇಟ್ಟಿರ್ತಾರೆ, ಯಾವುದು ಗೊತ್ತಾ?
ಹೆಂಡತಿ ಸುಳ್ಳು ಹೇಳ್ಬಾರ್ದು, ಏನೇ ಇದರೂ ಇರೋದನ್ನು ಹಾಗೆಯೇ ನೇರವಾಗಿ ಬಂದು ಹೇಳಬೇಕು.
ಗಂಡನನ್ನೇ ನಂಬಬೇಕು, ಆತನ ಕೆಲಸ ನಿರ್ಧಾರಗಳ ಬಗ್ಗೆ ನಂಬಿಕೆ ಇಡಬೇಕು, ಪ್ರಶ್ನೆ ಮಾಡದೆ ಸಪೋರ್ಟ್ ಮಾಡಬೇಕು.
ಆತ ಹೇಳುವ ಎಲ್ಲದನ್ನೂ ಅರ್ಥಮಾಡಿಕೊಳ್ಳಬೇಕು, ಕೆಲವೊಮ್ಮೆ ಹೇಳದೇ ಇರುವುದನ್ನೂ ಅರ್ಥ ಮಾಡಿಕೊಳ್ಳಬೇಕು.
ಕಾಳಜಿ ಮಾಡಬೇಕು, ಆತನ ಆಗುಹೋಗು ಅರಿಯಬೇಕು. ಆದರೆ ಅತಿಯಾದ ಕಾಳಜಿ ಮಾಡಬಾರದು. ಪ್ರೀತಿಯಲ್ಲಿ ಉಸಿರುಗಟ್ಟಿಸಬಾರದು.
ಕಿರುಚುವ, ಏರುದನಿಯಲ್ಲಿ ಮಾತನಾಡುವ ಹೆಂಡತಿ ಇಷ್ಟ ಇಲ್ಲ, ಸ್ವೀಟ್ ಆಗಿದ್ರೆ ಸಂಸಾರ ಸುಂದರ.
ಅನ್‌ಕಂಡೀಷನಲ್ ಆಗಿ ಪ್ರೀತಿಸ್ಬೇಕು. ಪ್ರೀತಿ ಯಾವ ಕಾರಣಕ್ಕೂ ಕಡಿಮೆ ಆಗಬಾರದು. ತಾನು ಪದೇ ಪದೆ ಪ್ರೀತಿಸುತ್ತೇನೆ ಎಂದು ಹೇಳದಿದ್ದರೂ ಹೆಂಡತಿ ಮಾತ್ರ ಹೇಳಬೇಕು.
ಆಕೆ ಬರೀ ಮನೆಕೆಲಸ, ಮಕ್ಕಳ ಕೆಲಸ ಎಂದೇ ಸಮಯ ಕಳೆಯಬಾರದು, ಕೆಲಸಕ್ಕೆ ಹೋಗಬೇಕು, ಜೀವನದಲ್ಲಿ ಗೋಲ್ ಇರಬೇಕು. ಪ್ರೊಫೆಶನಲ್ ಲೈಫ್ ಬೇಕು.
ಸದಾ ಸುಂದರವಾಗಿ ಕಾಣಬೇಕು, ಕೆಲಸ ಏನೋ ಎಷ್ಟೋ, ಗಂಡಸರು ಮನೆಗೆ ಬರುವ ಸಮಯಕ್ಕೆ ಮನೆ, ಆಕೆ ಎರಡೂ ಸ್ವಚ್ಛವಾಗಿ, ಸುಂದರವಾಗಿ ಕಾಣಬೇಕು.
ದಡ್ಡಿ ಹೆಂಡತಿ ಇಷ್ಟ ಇಲ್ಲ, ಆಕೆಗೆ ಜಾಣ್ಮೆಯೇ ಭೂಷಣ. ಆದರೆ ಗಂಡನಿಗಿಂತ ಜಾಣೆ ಆಗಿದ್ರೂ ಸ್ವಲ್ಪ ಕಷ್ಟ.
ಸೆನ್ಶುಯಲ್ ಹಾಗೂ ಸೆಕ್ಸಿಯಾಗಿರಬೇಕು. ವ್ಯಾಕ್ಸಿಂಗ್, ಥ್ರೆಡಿಂಗ್ ಬ್ಯೂಟಿ ಪಾರ್ಲರ್ ಕೆಲಸಗಳು ಆಗಿದ್ರೆ ಖುಷಿ, ಫೆಮಿನೈನ್ ಟಚ್ ಬೇಕು.
ಆಕೆ ಚೈಲ್ಡಿಶ್ ಆಗಿ ಆಡಬಹುದು, ಆದರೆ ಕೆಲವೊಮ್ಮೆ ಮಾತ್ರ. ಉಳಿದ ಎಲ್ಲ ಸಮಯದಲ್ಲಿಯೂ ಮೆಚ್ಯೂರ್ ಆಗಿ ಬಿಹೇವ್ ಮಾಡಬೇಕು, ಇಂಡಿಪೆಂಡೆಂಟ್ ಆಗಿಯೂ ಇರಬೇಕು.
ಚೆನ್ನಾಗಿ ಅಡುಗೆ ಮಾಡಬೇಕು, ಹಾಗೇ ಗ್ರೇಟ್ ಮದರ್ ಆಗಿದ್ರೆ ಇನ್ನೂ ಖುಷಿ, ಮಕ್ಕಳನ್ನು ನೋಡಿಕೊಳ್ಳೋಕೆ ಬರಬೇಕು..
ಇವು ಎಲ್ಲ ಗಂಡಸರ ಎಕ್ಸ್‌ಪೆಕ್ಟೇಷನ್ ಅಲ್ಲ, ಇದಕ್ಕಿಂತ ಹೆಚ್ಚು ಅಥವಾ ಇದಕ್ಕಿಂತ ಕಡಿಮೆ ನಿರೀಕ್ಷೆ ಇರುವ ಗಂಡಸರೂ ಇದ್ದಾರೆ. ಪ್ರತಿಯೊಬ್ಬರ ಮೈಂಡ್‌ಸೆಟ್ ಬೇರೆ ಅಲ್ವಾ?