ಹೃದಯಾಘಾತದಿಂದ ಬೆಂಗಳೂರಿನಲ್ಲಿ ಅಮಾನತುಗೊಂಡಿದ್ದ ಇನ್ಸ್​ಪೆಕ್ಟರ್ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನಗರದಲ್ಲಿ ಅಮಾನತು ಆಗಿದ್ದ ಇನ್ಸ್​ಪೆಕ್ಟರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ K.R​.ಪುರ ಠಾಣೆ ಇನ್ಸ್​ಪೆಕ್ಟರ್​ ನಂದೀಶ್​ ಎಂಬ ಮೃತ ಇನ್ಸ್​ಪೆಕ್ಟರ್. ಹೃದಯಾಘಾತದಿಂದ ಕೆ.ಆರ್​.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನಂದೀಶ್‌ ಮೈಸೂರಿನ ಹುಣಸೂರು ನಿವಾಸಿಯಾಗಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019 ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕಳೆದ ವಾರವಷ್ಟೇ
ಇನ್ಸ್​ಪೆಕ್ಟರ್​ ನಂದೀಶ್ ಸಸ್ಪೆಂಡ್​ ಆಗಿದ್ದರು. ಏರಿಯಾದಲ್ಲಿ ಅವಧಿ ಮೀರಿ ಪಬ್​ ನಡೆಸಲು ಅವಕಾಶ ನೀಡಿದ್ದಕ್ಕೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶಿಸಿದ್ದರು. ಇದೀಗ ಅವರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!