ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಬದಿಯಲ್ಲಿ ನಿಂತಿದ್ದ ಬಸ್ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಸ್ಟೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಜಾರ್ಖಂಡಿನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಧಾವತಾಂಡ್ ಪ್ರದೇಶದ ರಾಜ್ಯ ಹೆದ್ದಾರಿ 17 ರಲ್ಲಿ ಅಪಘಾತ ಸಂಭವಿಸಿದೆ.
ಟ್ಯಾಂಕರ್ ಸ್ಫೋಟಗೊಂಡ ನಂತರ, ಬೆಂಕಿ ಹೊತ್ತಿಕೊಂಡು ಒಂದರ ನಂತರ ಒಂದರಂತೆ ನಿಂತಿದ್ದ ಮೂರು ಬಸ್ಸುಗಳು ಧ್ವಂಸಗೊಂಡಿವೆ. ಹಲವು ಮರಗಳೂ ಸುಟ್ಟು ಕರಕಲಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಬರ್ ಲಾಕ್ರಾ ತಿಳಿಸಿದ್ದಾರೆ.