ಹಿಂದೂ ದೇಗುಲದ ಮರವನ್ನು ತಬ್ಬಿ ನಗ್ನ ಫೋಟೊಶೂಟ್ ಮಾಡಿಸಿದ ಇನ್ಸ್‌ಟಾಗ್ರಾಮರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡೋನೇಷ್ಯಾದ ಬಾಲಿಯ ದೇಗುಲವೊಂದರ ಮರವನ್ನು ತಬ್ಬಿ ಇನ್ಸ್‌ಟಾಗ್ರಾಮರ್ ಒಬ್ಬರು ನಗ್ನ ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.

ರಷ್ಯಾದ ಖ್ಯಾತ ಇನ್ಸ್‌ಟಾಗ್ರಾಮರ್ ಲೊಯ್ಜಾ ಕೊಶ್ಯಾಕ್ ಎಂಬಾಕೆ ಬಾಲಿಯ ದೇಗುಲದ ಮರಗಳ ಬಳಿ ನಗ್ನ ಶೂಟ್ ಮಾಡಿಸಿದ್ದಾಳೆ, ಬಾಲಿಯ ಹಿಂದೂ ಸಮುದಾಯದವ ಆಕ್ರೊಶಕ್ಕೆ ಇದು ಕಾರಣವಾಗಿದ್ದು, ತಕ್ಷಣವೇ ಮಹಿಳೆಯನ್ನು ಬಾಲಿಯಿಂದ ಗಡಿಪಾರು ಮಾಡಲಾಗಿದೆ.

ಲೊಯ್ಜಾ ಬಾಲಿ ಪ್ರವಾಸ ಕೈಗೊಂಡಿದ್ದು, ತಬನನ್ ದೇಗುಲ ವೀಕ್ಷಣೆಗೆ ಬಂದಿದ್ದಳು, ಈ ವೇಳೆ ಭಾರೀ ಗಾತ್ರದ ದೇವರ ಮರ ಆಕೆಯ ಕಣ್ಣಿಗೆ ಬಿದ್ದಿದೆ. ತಕ್ಷಣವೇ ನಗ್ನವಾಗಿ ನಿಂತು ಫೋಟೊಶೂಟ್ ಮಾಡಿಸಿದ್ದಾಳೆ. ಇದನ್ನು ತಮ್ಮ ಇನ್ಸ್‌ಟಾಗ್ರಾಮ್ ಖಾತೆಗಯಲ್ಲಿ ಹಂಚಿಕೊಂಡಿದ್ದಾರೆ. ಬಾಲಿಯ ಜನತೆ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದು, ನಮ್ಮ ಸಂಸ್ಕೃತಿಯನ್ನು ಗೌರವಿಸಿ ಇಲ್ಲವೇ ಬರಬೇಡಿ ಎಂದಿದ್ದಾರೆ. ಭಾರೀ ಪ್ರತಿಭಟನೆ ನಂತರ ಮಹಿಳೆಗೆ ಇನ್ನೆಂದೂ ಇಂಡೋನೇಷ್ಯಾ ಪ್ರವೇಶಿಸದಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!