Wednesday, February 21, 2024

ರಾಮಲಲಾನ ಪ್ರಾಣಪ್ರತಿಷ್ಠೆಗೆ ಆಹ್ವಾನ: ಧನ್ಯವಾದ ತಿಳಿಸಿದ ರಿಷಬ್ ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲಾ ನ ಪ್ರಾಣಪ್ರತಿಷ್ಠೆ ಸಂಭ್ರಮ ಮನೆ ಮಾಡಿದ್ದೂ , ದೇಶ ವಿದೇಶಗಳಿಂದ ಗಣ್ಯರು ಅಯೋಧ್ಯಾನಗರಿಯತ್ತ ಹೊರಟಿದ್ದಾರೆ.

ಇದರ ನಡುವೆ ರಾಮಮಂದಿರ ಉದ್ಘಾಟನೆಗೆ ರಿಷಬ್ ಶೆಟ್ಟಿ (Rishabh Shetty)ಅವರನ್ನೂ ಆಹ್ವಾನಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಅವಕಾಶಕ್ಕಾಗಿ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಜೊತೆ ಕನ್ನಡದ ಇನ್ನೂ ಅನೇಕ ನಟರಿಗೂ ಆಹ್ವಾನ ನೀಡಲಾಗಿದೆ. ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ (Nikhil Kumar) ಅವರಿಗೆ ರಾಮಮಂದಿರ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಉದ್ಘಾಟನೆಗೆ ಕುಟುಂಬ ಸಮೇತ ಬರುವಂತೆ, ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಹ್ವಾನ ನೀಡಲಾಗಿದೆ. ಯಶ್ ಅವರಿಗೂ ಬರುವಂತೆ ಆಹ್ವಾನ ನೀಡಲಾಗಿದೆಯಂತೆ. ಕನ್ನಡ ಸಿನಿಮಾ ರಂಗದ ಬೆರಳೆಣಿಕೆಯ ಕಲಾವಿದರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!