ಪಾಕ್ ನಟಿ ಜೊತೆ ಶೋಯೆಬ್‌ ಮಲೀಕ್‌ ವಿವಾಹ: ಸಾನಿಯಾ ತಂದೆ ಇಮ್ರಾನ್‌ ಮಿರ್ಜಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್‌ ಮಲೀಕ್‌ ಸಾನಿಯಾ ಮಿರ್ಜಾ ಅವರಿಂದ ವಿಚ್ಛೇದನ ಪಡೆದು ಕರಾಚಿಯಲ್ಲಿ ಪಾಕಿಸ್ತಾನದ ಜನಪ್ರಿಯ ನಟಿ ಸಜಾ ಜಾವೇದ್‌ ಅವರನ್ನು ವಿವಾಹವಾಗಿದ್ದಾರೆ.

ನಾವು ನಮ್ಮನ್ನು ಹೊಸ ಜೋಡಿಯಾಗಿ ರೂಪಿಸಿಕೊಂಡಿದ್ದೇವೆ ಎಂದು ಶೀರ್ಷಿಕೆಯೊಂದಿಗೆ ಹೊಸ ಪತ್ನಿಯೊಂದಿಗೆ ಶೋಯೆಬ್‌ ಮಲೀಕ್‌ ತಮ್ಮ ಮದುವೆಯ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇತ್ತ ಸಾನಿಯಾ ಮಿರ್ಜಾ ಅವರಿಗೆ ಶೋಯೆಬ್‌ ಮಲೀಕ್‌ ತಲಾಖ್‌ ನೀಡಿದ್ದಾರೆಯೇ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ ಮಿರ್ಜಾ ತಂದೆ ಇಮ್ರಾನ್‌ ಮಿರ್ಜಾ, ‘ಇದು ಖುಲಾ’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲಿಂ ನಿಖಾ ಅಂದರೆ ಮದುವೆಗಳಲ್ಲಿ ಖುಲಾ ಎಂದರೆ, ಹೆಣ್ಣಿಗೆ ಇರುವ ಅಧಿಕಾರವಾಗಿದೆ. ಗಂಡನೊಂದಿಗೆ ತನಗೆ ಬಾಳ್ವೆ ಮಾಡಲು ಇಷ್ಟವಿಲ್ಲ ಎಂದಾದಲ್ಲಿ ಆಕೆ ಖುಲಾ ನೀಡಿ ಬೇರೆ ಆಗಬಹುದಾಗಿದೆ. ಅದನ್ನೇ ಗಂಡು ನೀಡಿದಲ್ಲಿ ಅದನ್ನು ತಲಾಕ್‌ ಎನ್ನಲಾಗುತ್ತದೆ.

ಸಾನಿಯಾ ಮಿರ್ಜಾಗೆ ಶೋಯೆಬ್‌ ಮಲೀಕ್‌ ವಿಚ್ಛೇದನ ನೀಡುತ್ತಾರೆ ಎನ್ನುವ ರೂಮರ್‌ಗಳ ನಡುವೆಯೇ, ಶನಿವಾರ ಶೋಯೆಬ್‌ ಮಲೀಕ್‌ ಪಾಕಿಸ್ತಾನಿ ಮೂಲದ ನಟಿ ಸನಾ ಜಾವೇದ್‌ ಅವರನ್ನು ವಿವಾಹವಾಗಿ ಅದರ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!