Tuesday, March 28, 2023

Latest Posts

ನ್ಯುಮೋನಿಯಾದಿಂದ ಬಳಲುತ್ತಿದ 3 ತಿಂಗಳ ಮಗುವಿನ ಹೊಟ್ಟೆಗೆ 51 ಬಾರಿ ಇಟ್ಟರು ಕಾದ ಕಬ್ಬಿಣದ ರಾಡ್‍!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರದೇಶದಲ್ಲಿ ನ್ಯುಮೋನಿಯಾದಿಂದ (Pneumonia) ಬಳಲುತ್ತಿರುವ 3 ತಿಂಗಳ ಮಗುವಿನ ಹೊಟ್ಟೆಯ ಮೇಲೆ ಕಾದ ಕಬ್ಬಿಣದ ರಾಡ್‍ನಿಂದ (Hot Iron Rod) 51 ಬಾರಿ ಇಟ್ಟ ಆಘಾತಕಾರಿ ಘಟನೆ ನಡೆದಿದೆ.

ಇಲ್ಲಿನ ಶಹದೋಲ್ ಜಿಲ್ಲೆಯಲ್ಲಿ 3 ತಿಂಗಳ ಮಗುವಿಗೆ ಆಸ್ಪತ್ರೆಗೆ ಸೇರಿಸುವ ಮೊದಲು ಮಂತ್ರವಾದಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಬಾಲಕಿಯ ರೋಗವನ್ನು ಗುಣಪಡಿಸಲು 51 ಬಾರಿ ಆಕೆಯ ಹೊಟ್ಟೆಗೆ ಬಿಸಿ ರಾಡ್‍ನಿಂದ ಇಟ್ಟಿದ್ದಾರೆ.

ಬಳಿಕ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಮಗುವಿಗೆ ಕಬ್ಬಿಣದ ರಾಡ್‍ನಿಂದ ಚುಚ್ಚುತ್ತಿರುವುದನ್ನು ನಿಲ್ಲಿಸಲು ಮಗುವಿನ ತಾಯಿಗೆ ಮನವರಿಕೆ ಮಾಡಿದ್ದಾಳೆ. ಅದಾದ ಬಳಿಕ ಆ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ, ಉಸಿರಾಟದ ತೊಂದರೆಯಿಂದಾಗಿ 15 ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!