Saturday, April 1, 2023

Latest Posts

ಪಾಕ್ ಸ್ಟಾರ್ ಕ್ರಿಕೆಟಿಗನ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್ ಶಾ ಅಫ್ರಿದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನ್ ತಂಡದ ಸ್ಟಾರ್ ಬೌಲರ್​ ಶಾಹೀನ್ ಶಾ ಅಫ್ರಿದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 4 ರಂದು ಪಾಕ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಶಾ ಅಫ್ರಿದಿ ಅವರನ್ನು ವಿವಾಹವಾದರು.

ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಂ, ಶಾದಾಬ್ ಖಾನ್, ಫಖರ್ ಜಮಾನ್ ಮತ್ತು ಸರ್ಫರಾಜ್ ಅಹ್ಮದ್ ಪಾಲ್ಗೊಂಡಿದ್ದರು.


ಈ ಕುರಿತು ಟ್ವಿಟರ್ ನಲ್ಲಿ ಖುಷಿ ಹಂಚಿಕೊಂಡ ಶಾಹಿದ್ ಅಫ್ರಿದಿ , ಮಗಳು ಎಂಬುದು ನಮ್ಮ ಉದ್ಯಾನದ ಸುಂದರವಾದ ಹೂವು. ಏಕೆಂದರೆ ಅವು ಅರಳುವುದು ದೊಡ್ಡ ಆಶೀರ್ವಾದದಿಂದ. ಮಗಳು ಎಂಬುದು ನಮ್ಮ ಜೀವನದ ನಗು, ಕನಸು..ಹೃದಯಂತರಾಳದಿಂದ ನಾವು ಪ್ರೀತಿಸುವ ವ್ಯಕ್ತಿ. ಪೋಷಕರಾಗಿ, ನಾನು ನನ್ನ ಮಗಳನ್ನು ನಿಕ್ಕಾಹ್​ನಲ್ಲಿ ಶಾಹೀನ್ ಅಫ್ರಿದಿ ಅವರಿಗೆ ನೀಡಿದ್ದೇನೆ. ಅವರಿಬ್ಬರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಶಾಹೀನ್ ಅಫ್ರಿದಿ ಪಾಕಿಸ್ತಾನ್ ಪರ 25 ಟೆಸ್ಟ್​, 32 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟು 219 ವಿಕೆಟ್ ಪಡೆದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!