IPL | ಮ್ಯಾಚ್‌ ವೇಳೆ ಕೊಹ್ಲಿ ಕಾಲಿಗೆ ಬಿದ್ದಿದ್ದು ರಾಯಚೂರಿನ ಆರ್‌ಸಿಬಿ ಅಭಿಮಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಹೈ ವೋಲ್ಟೇಜ್‌ ಆರ್‌ಸಿಬಿ ಹಾಗೂ ಪಂಜಾಬ್‌ ಪಂದ್ಯದ ಮಧ್ಯದಲ್ಲೇ ಅಭಿಮಾನಿಯೊಬ್ಬ ಫೀಲ್ಡ್‌ಗೆ ಬಂದು ವಿರಾಟ್‌ ಕೊಹ್ಲಿಗೆ ಕಾಲಿಗೆ ಬಿದ್ದು ನಮಸ್ಕರಿಸಿದ್ದ. ಈತ ಯಾರೆಂದು ಇದೀಗ ತಿಳಿದುಬಂದಿದೆ.

ಕೊಹ್ಲಿ ಕ್ರಿಸ್‌ ಬರುತ್ತಿದ್ದಂತೆಯೇ ಅಭಿಮಾನಿ ಗೆರೆ ದಾಟಿ ಮೈದಾನದೊಳಗೆ ಓಡಿಬಂದು ಕೊಹ್ಲಿ ಕಾಲಿಗೆ ಬಿದ್ದಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿ ಆತನನ್ನು ಕ್ರೀಡಾಂಗಣದಿಂದ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ ತಾನು ಆರ್‌ಸಿಬಿ ಹಾಗೂ ವಿರಾಟ್‌ ಅವರ ಅಭಿಮಾನಿ, ರಾಯಚೂರಿನಿಂದ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!