IPL | ಹೈವೋಲ್ಟೇಜ್ ಥ್ರಿಲ್ಲರ್​ IPL ಮ್ಯಾಚ್ ​ಗೆ CSK vs GT ಸಜ್ಜು, ಕಾಳಗದಲ್ಲಿ ಗೆಲುವು ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತ್ತೊಂದು ರೋಚಕ, ಹೈವೋಲ್ಟೇಜ್ ಐಪಿಎಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯಗಳನ್ನು ಗೆದ್ದಿರುವ ಚೆನ್ನೈ ಮತ್ತು ಗುಜರಾತ್ ತಂಡಗಳು ಗೆಲುವಿನ ನಾಗಾಲೋಟವನ್ನು ಮುಂದುವರಿಸಲು ಪ್ರಯತ್ನಿಸುತ್ತಿವೆ. ಆದರೆ ಈ ಓಟದ ಫಲಿತಾಂಶದ ಲೆಕ್ಕಾಚಾರದ ಬದಲು ಮುಂಚೂಣಿಯಲ್ಲಿರುವವರ ಮುಖಾಮುಖಿಯೇ ಹೆಚ್ಚು ಗಮನ ಸೆಳೆಯುತ್ತಿದೆ.

ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಪಂದ್ಯ ನಡೆಯಲಿದೆ. ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭವನ್ನು ಪಡೆದಿವೆ ಮತ್ತು ಚೆಪಾಕ್​ ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿವೆ. ಹಾಲಿ ಚಾಂಪಿಯನ್ಸ್​ ಮತ್ತು ರನ್ನರ್ ಅಪ್ ತಂಡಗಳ ನಡುವಿನ ಕದನವು ಹೆಚ್ಚು ಗಮನ ಸೆಳೆಯುತ್ತದೆ.

ಒಂದೆಡೆ ಹಾಲಿ ಚಾಂಪಿಯನ್ಸ್​ ಹಾಗೂ ರನ್ನರ್​ಅಪ್​ ನಡುವಿನ ಕದನ ಕುತೂಹಲ ಮೂಡಿಸಿದರೆ, ಇನ್ನೊಂದೆಡೆ ಯಂಗ್​ ಕ್ಯಾಪ್ಟನ್ಸ್​ ಮುಖಾಮುಖಿ ಹೇಗಿರುತ್ತೆ ಎಂಬ ಪ್ರಶ್ನೆ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್​ ನೂತನ ನಾಯಕ ಋತುರಾಜ್ ಗಾಯಕ್ವಾಡ್ ಆ್ಯಂಡ್ ಗುಜರಾತ್​ ಟೈಟನ್ಸ್​ ಕ್ಯಾಪ್ಟನ್ ಶುಭ್​ಮನ್​​ ಗಿಲ್ ಮುಖಾಮುಖಿಯಲ್ಲಿ ಗೆಲುವಿನ ಪತಾಕೆ ಹರಿಸೋದು ಯಾರು ಅನ್ನೋದೇ ಫ್ಯಾನ್ಸ್ ಗಳ ಯಕ್ಷ ಪ್ರಶ್ನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!